

ಉಜಿರೆ: ಡಿ.01ರಂದು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಡಿ.2 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆಯಲ್ಲಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಮತ್ತು ಯೋಜಿಕ್ ಸೈನ್ಸ್ ಇಲ್ಲಿನ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ.ಶ್ರುತಿ ಚಿಕ್ಕೊಂಡ್ ಇವರು ಏಡ್ಸ್ ಕುರಿತು ಮಾಹಿತಿ ನೀಡಿದರು.
ಏಡ್ಸ್ ಕುರಿತು ಜಾಗೃತಿ ಮೂಡಿಸುವ ಹಾಗೂ ಏಡ್ಸ್ ತಡೆಗಟ್ಟುವುದು ಹೇಗೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ವೇದಿಕೆಯಲ್ಲಿದ್ದ ಸಂಸ್ಥೆಯ ಪ್ರಾಂಶುಪಾಲ ವಿ.ಪ್ರಕಾಶ್ ಕಾಮತ್ ಇವರು ಮಾತನಾಡಿ ಬದುಕು ಎಂಬುದು ಒಂದು ಕಲೆ ಇದರಲ್ಲಿ ನಾವು ಅನೇಕ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ನಮ್ಮ ಜೀವನಕ್ಕೆ ಪೂರಕವಾಗಿ ತೆಗೆದುಕೊಳ್ಳುವ ಮೂಲಕ ವೈಯಕ್ತಿಕ ಶಿಸ್ತು ಬೆಳೆಸಿಕೊಳ್ಳಬೇಕು. ಏಡ್ಸ್ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಇಲಿ ಜ್ವರ, ಮಂಗನ ಕಾಯಿಲೆ, ಕೋವಿಡ್-19 ಈ ಎಲ್ಲಾ ವಿಷಯಗಳು ಕುರಿತು ಜಾಗೃತಿ, ಅದೇ ರೀತಿ ಎಲ್ಲದಕ್ಕೂ ಆತ್ಮಸ್ಥೈರ್ಯ ಅತೀ ಅಗತ್ಯ ಎಂದು ಹೇಳಿದರು.
ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಯಾಗಿರುವ ಸಂಧ್ಯಾ ಇವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು.