ಡಿ.3: ಹಳೆಕೋಟೆ ಜೋರ್ಡನ್ ರಿವರ್ ವೆಲ್ ವ್ಯೂ ರೂಮ್ಸ್ ಸೂಟ್ಸ್ ವಿಸ್ತೃತ ಕಟ್ಟಡ ಉದ್ಘಾಟನೆ

0

ಬೆಳ್ತಂಗಡಿ: ಹಳೆಕೋಟೆ ಜೋರ್ಡನ್ ರಿವರ್ ರೆಸ್ಟೋರೆಂಟ್ ನ ವೆಲ್ ವ್ಯೂ ರೂಮ್ಸ್ ಸೂಟ್ಸ್‌ನಲ್ಲಿ ವಿಸ್ತೃತ ಕಟ್ಟಡ ಡಿ.3ರಂದು ಉದ್ಘಾಟಣೆಗೊಳ್ಳಲಿದೆ.

ಕಳೆದ 4 ವರ್ಷದ ಹಿಂದೆ ಪ್ರಾರಂಭಗೊಂಡ ಜೋರ್ಡನ್ ರೆಸ್ಟೋರೆಂಟ್ ಮತ್ತು ವೆಲ್ ವ್ಯೂ ರೂಮ್ಸ್ ಗ್ರಾಹಕರ ಅನುಕೂಲಕ್ಕಾಗಿ ಸುಂದರ ಇಂಟೀರಿಯರ್, ಐಷಾರಾಮಿ ಕೋಣೆಗಳು, ಸ್ಥಳೀಯರಿಗೆ, ಪ್ರವಾಸಿಗರಿಗೆ ಅವಶ್ಯಕತೆಗಳನ್ನು ಪೂರೈಸಲು ಗ್ರಾಹಕರ ಸೇವೆಗೆ ಸಿದ್ಧವಾಗಿದೆ. ಬೆಳ್ತಂಗಡಿ ಹೋಲಿ ರಿಡಿಮರ್ ಚರ್ಚ್‌ನ ಧರ್ಮಗುರು ವ. ಫಾ. ವಾಲ್ಟರ್ ಡಿಮೆಲ್ಲೋ ಆಶೀರ್ವಚನ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ವಸಂತ ಬಂಗೇರ, ಉದ್ಯಮಿ ಶಶಿಧರ ಶೆಟ್ಟಿ ಬರೋಡ ನವಶಕ್ತಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಸುರತ್ಕಲ್‌ನ ಉದ್ಯಮಿ ಸತೀಶ್ ಮುಚ್ಚೂರು, ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಕೆ.ಮೋಹನ್ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.

ವಿಶೇಷತೆಗಳು: ಡಿಲರ್ಸ್ ಮಲ್ಟಿ ಡಿಲಕ್ಸ್, ಸೂಟ್ಸ್ ರೂಮ್ಸ್, ಎಸಿ ಮತ್ತು ನಾನ್ ಎಸಿ, ವೆಜ್‌ನಾನ್‌ವೆಜ್ ರೆಸ್ಟೋರೆಂಟ್, ಸುಸಜ್ಜಿತ, ವಿಶಾಲವಾದ, ವರ್ಣಮಯ ಕೊಠಡಿಗಳು, ವಿಶಾಲವಾದ ಪಾಕಿಂಗ್ ಸೌಲಭ್ಯ, ಲಿಫ್ಟ್, ವೈಫೈ ಸೌಲಭ್ಯ, ಸುಸಜ್ಜಿತ ರಾಕ್ ಗಾರ್ಡನ್, ಅತ್ಯಾಧುನಿಕ ಕಾನ್ಸರೆನ್ಸ್ ಮೀಟಿಂಗ್ ಹಾಲ್, ಎಂಗೇಜ್‌ಮೆಂಟ್, ಬರ್ತಡೇ ಪಾರ್ಟಿ, ಮೆಹಂದಿ ಮೊದಲಾದ ಸಭೆ ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮ ನಡೆಸಲು ಎ.ಸಿ. ಹಾಲ್ ಮುಂತಾದ ಸೌಲಭ್ಯಗಳನ್ನು ಹೊಂದಿದೆ ಎಂದು ಮಾಲಕ ಜೈಸನ್ ಡಿಸೋಜ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here