ಮಂಗಳೂರು ವಿ.ವಿ. ಅಂತರ್‌ಕಾಲೇಜು ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ಉಜಿರೆ ಎಸ್‌ಡಿಎಂಗೆ ಪ್ರಶಸ್ತಿ

0

ಉಜಿರೆ: ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗ ಮತ್ತು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಜಂಟಿ ಆಶ್ರಯದಲ್ಲಿ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಅಂತರ್‌ಕಾಲೇಜು ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜು ತಂಡ ಮತ್ತು ಅತಿಥೇಯ ಎಸ್.ಡಿ.ಎಂ. ಕಾಲೇಜು ತಂಡದ ಮಧ್ಯೆ ನಡೆದ ಅಂತಿಮ ನಿರ್ಣಾಯಕ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡ ಶ್ರೀ ಪಾಟೀಲ್ ಸೌಕೂರ್ ಅಂತಯ್ಯ ಶೆಟ್ಟಿ ಸ್ಮಾರಕ ಫಲಕ ಪಡೆಯಿತು.

ಎಸ್.ಡಿ.ಎಂ. ಕಾಲೇಜು ತಂಡ ರನ್ನರ್‌ಅಪ್ ಸ್ಥಾನ ಗಳಿಸಿತು. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮತ್ತು ಎಸ್.ಡಿ.ಎಂ. ಕಾಲೇಜು ತಂಡಗಳ ನಡುವೆ ನಡೆದ ಸೆಮಿಫೈನಲ್‌ನಲ್ಲಿ 2-0 ಸೆಟ್‌ನಿಂದ ಜಯಿಸಿ ಎಸ್.ಡಿ.ಎಂ. ಕಾಲೇಜು ತಂಡ ಅಂತಿಮ ಪಂದ್ಯಾಟಕ್ಕೆ ಆಯ್ಕೆಯಾಯಿತು.ಇನ್ನೊಂದು ಸೆಮಿಫೈನಲ್‌ನಲ್ಲಿ ಆಳ್ವಾಸ್ ಕಾಲೇಜು ತಂಡ ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜು ತಂಡವನ್ನು 2-0 ಸೆಟ್‌ನಿಂದ ಮಣಿಸಿ ಅಂತಿಮ ಪಂದ್ಯಕ್ಕೆ ಆಯ್ಕೆಯಾಗಿತ್ತು.

ತಲಾ ಎರಡು ಪಂದ್ಯಾಟಗಳಲ್ಲಿ ಸಮಾನವಾಗಿ ಗೆದ್ದುದರಿಂದ ಅಂತಿಮ ನಿರ್ಣಾಯಕ ಪಂದ್ಯ ನಡೆಸಲಾಯಿತು. ಆಳ್ವಾಸ್ ತಂಡ 15 ಅಂಕ ಗಳಿಸಿದರೆ ಎಸ್.ಡಿ.ಎಂ. ಕಾಲೇಜು ತಂಡ 10 ಅಂಕ ಗಳಿಸಿತು. ಬೆಸ್ಟ್ ಸೆಟ್ಟರ್ ಪ್ರಶಸ್ತಿಯನ್ನು ಆಳ್ವಾಸ್‌ನ ಸುಶೀಲ್, ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಯನ್ನು ಆಳ್ವಾಸ್‌ನ ಮನು, ಬಿ.ಎಲ್., ಬೆಸ್ಟ್ ಲಿಬ್ರೊ ಪ್ರಶಸ್ತಿಯನ್ನು ಎಸ್‌ಡಿಎಂನ ಆಶಿಕ್ ಗೌಡ ಮತ್ತು ಬೆಸ್ಟ್ ಅಟೇಕರ್ ಪ್ರಶಸ್ತಿಯನ್ನು ಆಳ್ವಾಸ್‌ನ ಉನಾನ್ ಪಡೆದುಕೊಂಡರು.

ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜ, ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ ಕುಮಾರ ಹೆಗ್ಡೆ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಬಾಲಭಾಸ್ಕರ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ವಿಜೇತರಿಗೆ ಫಲಕ ನೀಡಿದರು. ಪ್ರೊ. ಮಹೇಶ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ರಮೇಶ್ ಮತ್ತು ಶಾರದಾ, ಸಂದೇಶ್ ಪೂಂಜ ಉಪಸ್ಥಿತರಿದ್ದರು. ಒಟ್ಟು 8 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿತ್ತು.

LEAVE A REPLY

Please enter your comment!
Please enter your name here