ಪತ್ತಿನ ಸಂಘಗಳ ರಾಷ್ಟ್ರೀಯ ಅಧಿವೇಶನಕ್ಕೆ ಶ್ರೀ ಗುರುದೇವ ಮತ್ತು ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘ ಆಯ್ಕೆ

0

ಬೆಳ್ತಂಗಡಿ: ಪತ್ತಿನ ಸಂಘಗಳ ಸಮಸ್ಯೆಗಳನ್ನು ಸಂಘಟಿತ ರೂಪದಲ್ಲಿ ಪ್ರಸ್ತುತ ಪಡಿಸುವುದಕ್ಕಾಗಿ ಡಿ.2ಮತ್ತು 3ರಂದು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನದಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ರವರ ಅಧ್ಯಕ್ಷತೆಯಲ್ಲಿ ನಡೆಯುವ ಐತಿಹಾಸಿಕ ಪ್ರಥಮ ಸಹಕಾರಿಗಳ ರಾಷ್ಟ್ರೀಯ ಅಧಿವೇಶನ ಹಾಗೂ ದಿಲ್ಲಿ ಚಲೋದಲ್ಲಿ ಭಾಗವಹಿಸಲು ಆಯ್ದ ಸಹಕಾರ ಸಂಘಗಳಲ್ಲಿ ಬೆಳ್ತಂಗಡಿಯ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಮತ್ತು ಉಜಿರೆಯ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘ ಆಯ್ಕೆಯಾಗಿರುತ್ತದೆ.

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಪ್ರತಿನಿಧಿಯಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಮತ್ತು ಕೇಂದ್ರ ಕಚೇರಿ ಹಿರಿಯ ವ್ಯವಸ್ಥಾಪಕ ಕೀರ್ತನ್ ಕುಮಾರ್, ಉಜಿರೆ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಪ್ರತಿನಿಧಿಯಾಗಿ ಸಂಘದ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ಭಾಗವಹಿಸಲಿದ್ದಾರೆ .

p>

LEAVE A REPLY

Please enter your comment!
Please enter your name here