ಬೆಳಾಲು: ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮಾಯ ಇಲ್ಲಿ ಖಾಲಿ ಇದ್ದ ಪದವೀಧರ ಪ್ರಾಥಮಿಕ ಶಿಕ್ಷಕರ (6-8) ಹುದ್ದೆಯನ್ನು (ಗಣಿತ -ವಿಜ್ಞಾನ ) ಸುಪ್ರಿಯ ಎಸ್.ಕೆ ಇವರು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೌನ್ಸೆಲಿಂಗ್ ನಲ್ಲಿ ಸ್ಥಳ ಆಯ್ಕೆ ಮಾಡಿಕೊಂಡಿದ್ದರು.ಅಂತಿಮವಾಗಿ ಎಲ್ಲಾ ದಾಖಲೆಗಳ ನೈಜತೆ ಪರಿಶೀಲನೆಯ ನಂತರ ಜಿಲ್ಲಾ ಉಪನಿರ್ದೇಶಕರು ದ.ಕ ಇವರಿಂದ ನೇಮಕಾತಿ ಆದೇಶ ಪಡೆದು, ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಚಾಲನಾ ಆದೇಶದೊಂದಿಗೆ ನ.28ರಂದು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ.
ಶಾಲೆಯ ಮುಖ್ಯಶಿಕ್ಷಕರಾದ ವಿಠಲ್ ಎಂ ಇವರು ಶಿಕ್ಷಕರನ್ನು ಕರ್ತವ್ಯಕ್ಕೆ ಸೇರ್ಪಡೆ ಮಾಡಿಕೊಂಡು ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಪರವಾಗಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಶಿಕ್ಷಕಿಯ ತಂದೆಯವರಾದ ಕೃಷ್ಣಪ್ಪ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.
ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಹೌಸಿಂಗ್ ಬೋರ್ಡ್ ನ ಟೀಚರ್ಸ್ ಲೇಔಟ್, ನಿವಾಸಿಗಳಾದ ಕೃಷ್ಣಪ್ಪ.ಪಿ ಹಾಗೂ ಸಣ್ಣಮ್ಮ.ಹೆಚ್.ಎಸ್ ಎಂಬ ಶಿಕ್ಷಕ ದಂಪತಿಗಳ ಮಗಳಾಗಿದ್ದು, 2022 ರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ (6-8 ನೇ ತರಗತಿ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಆಯ್ಕೆಯಾಗಿರುತ್ತಾರೆ.