ಸಂಜೀವಿನಿ ಒಕ್ಕೂಟದ ಎಂಬಿಕೆ ಯೂನಿಯನ್ ನಿಂದ ಕನಿಷ್ಟ ವೇತನ ಹೆಚ್ಚಿಸುವಂತೆ ಒತ್ತಾಯಿಸಿ ಡಿ.1ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ- ಶಾಸಕರಿಗೆ, ಎಂ.ಎಲ್.ಸಿ, ತಾ.ಪಂ ಇಒ ಗೆ ಮನವಿ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತ್ ಮಟ್ಟದ ಮುಖ್ಯಪುಸ್ತಕ ಬರಹಗಾರರು (MBK) ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ (LCRP) ಯೂನಿಯನ್ ಬೆಳ್ತಂಗಡಿ ಇದರ ವತಿಯಿಂದ ಕನಿಷ್ಠ ವೇತನ ಹೆಚ್ಚಳ ಮತ್ತು ವಿವಿಧ ಬೇಡಿಕೆಗಳ ಬಗ್ಗೆ ಒತ್ತಾಯಿಸಿ ಡಿಸೆಂಬರ್ 1 ರಿಂದ ಅನರ್ದಿಷ್ಟಾವಧಿ ಮುಷ್ಕರ ನಡೆಸುವ ಬಗ್ಗೆ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹಾಗೂ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ರವರಿಗೆ ತಾಲೂಕು ಯೂನಿಯನ್ ಮೂಲಕ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಯೂನಿಯನ್ ಅಧ್ಯಕ್ಷೆ ಪುಷ್ಪಾ ಆಚಾರ್ಯ ಕಲ್ಮಂಜ, ುಪಾಧ್ಯಕ್ಷೆ ಹರಿಣಾಕ್ಷಿ ಆಚಾರ್ಯ ಬೆಳಾಲು, ಕಾರ್ಯದರ್ಶಿ ಮಲ್ಲಿಕಾ ಶೆಟ್ಟಿ ಅಂಡಿಂಜೆ, ಜೊತೆ ಕಾರ್ಯದರ್ಶಿ ಸವಿತಾ ನಾವೂರು, ಕೋಶಾಧಿಕಾರಿ ಚಂದ್ರಾವತಿ ಧರ್ಮಸ್ಥಳ ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here