ಅರಸಿನಮಕ್ಕಿ ಅಂಗನವಾಡಿ ಕೇಂದ್ರದ ಮಕ್ಕಳ ದಿನಾಚರಣೆ

0

ಅರಸಿನಮಕ್ಕಿ: ಅರಸಿನಮಕ್ಕಿ ಅಂಗನವಾಡಿ ಕೇಂದ್ರದ ಮಕ್ಕಳ ದಿನಾಚರಣೆಯು ನ.23ರಂದು ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪುಟಾಣಿ ಹಿತ ಮಾಡಿದರು.

ಸಭಾ ಅಧ್ಯಕ್ಷತೆಯನ್ನು ಪುಟಾಣಿ ಗೌತಮಿ ವಹಿಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಅನ್ನಪೂರ್ಣ, ಗ್ರಾ.ಪಂ ಉಪಾಧ್ಯಕ್ಷ ಸುಧೀರ್ ರಾವ್, ಪಂಚಾಯತ್ ಸದಸ್ಯೆ ಲಾವಣ್ಯ, ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ಧರ್ಮರಾಜ್ ಅಡ್ಕಾಡಿ, ಆಶಾ ಕಾರ್ಯಕರ್ತೆ ಸರೋಜಿನಿ ನಾಯ್ಕ್, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸುನೀತಾ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರವೀಣ್ ಕುಲಾಲ್ ನಿರೂಪಿಸಿದರು.ರೇಷ್ಮಾ ಸ್ವಾಗತಿಸಿದರು.ನವಶಕ್ತಿ ಆಟೋ ಚಾಲಕ-ಮಾಲಕ ಸಂಘದಿಂದ ಅಂಗನವಾಡಿ ಕೇಂದ್ರಕ್ಕೆ 20 ಬೇಬಿ ಚಯರ್ ಕೊಡುಗೆಯಾಗಿ ನೀಡಿದರು.

ಐಸಿರಿ ಹೋಟೆಲ್ ಮಾಲಕ ಭಾಸ್ಕರ, ವಿಂದ್ಯಾ ಚಪ್ಪಲ್ ಸ್ಷ್ಯಾಂಡ್ ನೀಡಿದರು.

ಅಂಗನವಾಡಿ ಕಾರ್ಯಕರ್ತೆ ವಿಜಯಾ.ಕೆ ರವರು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here