ನೆರಿಯದಲ್ಲಿ ಆರು ಜನರಿದ್ದ ಕಾರಿನ ಮೇಲೆ ಕಾಡಾನೆ ದಾಳಿ:ಕೆಲವರಿಗೆ ಗಾಯ:ಕಾರು ಜಖಂ:ಆತಂಕದಲ್ಲಿ ಜನತೆ

0

ನೆರಿಯ: ನೆರಿಯ ಪೋಸ್ಟ್ ಆಫೀಸ್ ಬಳಿ ಕಾಡಾನೆ ಕಾರೊಂದರ ಮೇಲೆರಗಿದ ಘಟನೆ ನಡೆದಿರುವುದಾಗಿ ಸ್ಥಳೀಯರು ಸುದ್ದಿಗೆ ಮಾಹಿತಿ ಒದಗಿಸಿದ್ದಾರೆ.

ಆಲ್ಟೋ ಕಾರ್ ನಲ್ಲಿ ಆರು ಜನ ಇದ್ದಾಗಲೇ ದಾಳಿ ನಡೆದಿದೆ ಎನ್ನಲಾಗಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಅಲ್ಲದೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ.

ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here