ನಿಡ್ಲೆ ಗ್ರಾ.ಪಂ ನಿಂದ ಮಕ್ಕಳ ಗ್ರಾಮಸಭೆ

0

ನಿಡ್ಲೆ: ನಿಡ್ಲೆ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳ ಗ್ರಾಮಸಭೆಯು ಸ.ಹಿ.ಪ್ರಾ ಶಾಲೆ ಬರೆಂಗಾಯದಲ್ಲಿ ನ.23ರಂದು ಜರುಗಿತು.ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲಾ ವಹಿಸಿದ್ದರು.

ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಹೆಬ್ಬಾ‌ರ್, ಗ್ರಾ.ಪಂ ಸದಸ್ಯರಾದ ಮೋಹನ್‌ ಪೂಜಾರಿ, ಶೈಲಜಾ, ಬರೆಂಗಾಯ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ್, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೊಕ್ಕಡ ವಲಯ ಮೇಲ್ವಿಚಾರಕಿ ವಿನೋದ, ಮಕ್ಕಳ ಹಕ್ಕುಗಳ ಸಂಸ್ಥೆಯ ತಾಲೂಕು ಸಂಯೋಜಕ ವಿನೋದ್ ಪ್ರಸಾದ್, ನಿಡ್ಲೆ ಗ್ರಾಮದ ಬೀಟ್ ಪೊಲೀಸ್ ಸೌಭಾಗ್ಯ, ಶಾಲಾ ನಾಯಕಿ ಅಂಕಿತಾ, ಗ್ರಾ.ಪಂ. ಸದಸ್ಯರು, ನಿಡ್ಲೆ ಗ್ರಾ.ಪಂ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಗ್ರಂಥಪಾಲಕಿ ಶಕುಂತಳಾ ಸ್ವಾಗತಿಸಿ, ಕಾರ್ಯದರ್ಶಿ ಕೇಶವ ಕಾರ್ಯಕ್ರಮ ನಿರೂಪಿಸಿ, ಪಂ. ಅ. ಅಧಿಕಾರಿ ದೀಪಕ್ ರಾಜ್ ವಂದಿಸಿದರು.

LEAVE A REPLY

Please enter your comment!
Please enter your name here