ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪಟುಗಳಿಗೆ ಸ್ವಾಗತ

0

ಉಜಿರೆ: ಇತ್ತೀಚೆಗೆ ಬೆಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ರೋಸಾ ಜೋಯ್ ಹಾಗೂ ದೀಪಿಕಾ ಇವರಿಗೆ ಸ್ವಾಗತವನ್ನು ಕೋರಲಾಯಿತು.

ರಾಜ್ಯ ಮಟ್ಟದಲ್ಲಿ ಆಟವಾಡಿ ವಿಜೇತರಾದ ಕಶ್ವಿ ಕೋಟ್ಯಾನ್, ಅನುಷ್ಕಾ, ಅನನ್ಯ ರೋಸ್, ರೆನಿಶಾ, ಹಾಗೂ ಹೆಝಲ್ ಪಿಂಟೋ ಇವರನ್ನು ಸ್ವಾಗತಿಸಿ ಗೌರವಿಸಲಾಯಿತು.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮಕ್ಕಳ ಪೋಷಕರಾದ ಜಾಯ್, ಪುಷ್ಪಾ, ವಿನಯಚಂದ್ರ, ಭಾರತಿ ಉಪಸ್ಥಿತರಿದ್ದರು.ಶಾಲಾ ಸಂಚಾಲಕ ಫಾ.ಜೇಮ್ಸ್ ಡಿ’ಸೋಜಾ ವಿಜೇತ ಮಕ್ಕಳಿಗೆ ಶುಭಹಾರೈಸಿದರು.ಶಾಲಾ ಪ್ರಿನ್ಸಿಪಾಲ್ ಫಾ.ವಿಜಯ ಲೋಬೋ ವಿಜೇತ ಮಕ್ಕಳ ಪಾಲಕರ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮಕ್ಕಳಿಗೆ ಶುಭ ಹಾರೈಸಿದರು.

ಪಾಲನಾ ಮಂಡಳಿ ಉಪಾಧ್ಯಕ್ಷ ಆ್ಯಂಟನಿ ಫೆರ್ನಾಂಡಿಸ್ ಮಕ್ಕಳಗೆ ಶುಭಹಾರೈಸಿದರು.ದೈಹಿಕ ಶಿಕ್ಷಕ ವಸಂತ ಹೆಗ್ಡೆಯವರನ್ನು ಅಭಿನಂದಿಸಲಾಯಿತು.ಪ್ರಭಾಕರ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here