

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಆಗಿ ಪೃಥ್ವಿ ಸಾನಿಕಂ ಅವರು ಮತ್ತೆ ಕಾರ್ಯ ನಿರ್ವಹಿಸಲಿದ್ದಾರೆ. ಸರಕಾರ ಒಟ್ಟು 13 ತಹಶೀಲ್ದಾರ್ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಇದರಲ್ಲಿ ಪೃಥ್ವಿ ಸಾನಿಕಮ್ ಅವರೂ ಒಳಗೊಂಡಿದ್ದಾರೆ. ತಹಶೀಲ್ದಾರ್ ಮಹೇಶ್ ಜೆ. ಅವರ ವರ್ಗಾವಣೆಯಾದ ಬಳಿಕ ಬೆಳ್ತಂಗಡಿಗೆ ಆಗಮಿಸಿದ್ದ ಪೃಥ್ವಿ ಸಾನಿಕಂ ಅವರು 2022ರ ಜೂನ್ 18ರಿಂದ 2023ರ ಫೆಬ್ರವರಿ 2ರವರೆಗೆ ಕಾರ್ಯ ನಿರ್ವಹಿಸಿದ್ದರು. ಬಳಿಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹರಿಹರ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದರು. ಇವರ ವರ್ಗಾವಣೆಯ ಬಳಿಕ 2023ರ ಫೆಬ್ರವರಿ 3ರಿಂದ ಮಾರ್ಚ್ 5ರವರೆಗೆ ಸಚ್ಚಿದಾನಂದ ಎಸ್. ಕುಚನೂರು ಮತ್ತು ಟಿ. ಸುರೇಶ್ ಕುಮಾರ್ ಅವರು 2023ರ ಮಾರ್ಚ್ ೬ರಿಂದ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಮತ್ತೆ ಪೃಥ್ವಿ ಸಾನಿಕಂ ಅವರು ಬೆಳ್ತಂಗಡಿಯಲ್ಲಿ ತಾಲೂಕು ತಹಶೀಲ್ದಾರ್ ಮತ್ತು ದಂಡಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಬೆಳ್ತಂಗಡಿ ತಾಲೂಕಿನ 52ನೇ ತಹಶೀಲ್ದಾರ್ ಅಗಿ ಕಾರ್ಯ ನಿರ್ವಹಿಸಲಿರುವ ಚಿತ್ರದುರ್ಗ ಜಿಲ್ಲೆಯ ಪೃಥ್ವಿ ಸಾನಿಕಂ ಅವರು ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿಯೂ ಆಗಿರುವ ಕಾರ್ಯ ನಿರ್ವಹಿಸಲಿದ್ದಾರೆ. ನಿರ್ಗಮಿತ ತಹಸೀಲ್ದಾರ್ ಟಿ.ಸುರೇಶ್ ಕುಮರ್ ಅವರು ಪೃಥ್ವಿ ಸಾನಿಕಂ ಅವರಿಗೆ ಅಧಿಕಾರ ಹಸ್ತಾಂತರಿಸಿದರು.