

ವೇಣೂರು : ಕೊಕ್ರಾಡಿ ಗ್ರಾಮದ ಬೊಳ್ಳಕುಮೇರು ಎಂಬಲ್ಲಿ ಸುಲ್ಕೇರಿ ನದಿ ನೀರಿನಲ್ಲಿ ಡ್ರಜ್ಜಿಂಗ್ ಮಿಶನ್ ಅಳವಡಿಸಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ದಂಧೆಯನ್ನು ವೇಣೂರು ಪೊಲೀಸರು ನ.20ರಂದು ಪತ್ತೆ ಹಚ್ಚಿದ್ದಾರೆ.
ಅಬ್ಬಾಸ್ ಎಂಬವರ ತೋಟದಲ್ಲಿ ಚಂದ್ರಶೇಖರ್ ಹೆಗ್ಡೆ ಎಂಬವರು ಅಕ್ರಮವಾಗಿ ಮರಳುಗಾರಿಕೆ ಮಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾತ್ರಿ 9ಕ್ಕೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಆರೋಪಿಗಳು ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿರುವುದು ಕಂಡುಬಂದಿತ್ತು.ಡ್ರಜ್ಜಿಂಗ್ ಮಶಿನ್ ಅಳವಡಿಸಿದ ಸ್ಥಳದಲ್ಲಿ ನದಿಯ ನೀರು ಜಾಸ್ತಿ ಇದ್ದುದರಿಂದ ರಾತ್ರಿಯಾಗಿರುವುದರಿಂದ ಸದ್ರಿ ಮಿಶನ್ ಹಾಗೂ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡು ಅಬ್ಬಾಸ್ ಮತ್ತು ಚಂದ್ರಶೇಖರ ಹೆಗ್ಡೆ ವಿರುದ್ದ ಸ್ವ-ಪಿರ್ಯಾದಿಯನ್ನು ತಯಾರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.