ಶಿಶಿಲ: ಶಿಶಿಲ ಗ್ರಾಮದ ದೋನೋಡಿ ಯುವ ಬ್ರಿಗೇಡ್ ಕಾರ್ಯಕರ್ತ ತಿಲಕ್ ರ ಮದುವೆ ಮಂಟಪದ ಮುಂಭಾಗ ಮದುವೆ ಒಮ್ಮೆ ಮಾತ್ರ ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿ ಆಗಬೇಕು ಏನಂತೀರಿ.ಎನ್ನುವ ಶೀರ್ಷಿಕೆಯ ಮೋದಿ ಸ್ಟ್ಯಾಚು ಯುವ ಬ್ರಿಗೇಡ್ ಕಾರ್ಯಕರ್ತನ ಮದುವೆಯ ಸಂಭ್ರಮದಲ್ಲಿ ತನ್ನ ಸ್ವಂತ ಖುಷಿಯ ನಡುವೆ ಮೋದಿ ಪರ ಅವರ ಅಭಿವೃದ್ದಿಯ ಯೋಜನೆಗಳನ್ನು ಮದುವೆಗೆ ಬಂದ ಅತಿಥಿಗಳಿಗೆ ತಲುಪಿಸುವ ಬಹು ದೊಡ್ಡ ಯೋಚನೆ ಮತ್ತು ಸಾಹಸದೊಂದಿಗೆ ಇಳಿದು ಮದುವೆ ಸಭಾಭವನದ ಸುತ್ತ ಮೋದಿ ಅವರ ಜನಪ್ರಿಯ ಯೋಜನೆಗಳ ಸವಿವರವನ್ನು ಒಳಗೊಂಡ ಪೋಸ್ಟರ್ಗಳನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಮದುವೆ ಎಂದರೆ ತನ್ನ ಖಾಸಗಿತನವನ್ನು ಬಯಸುವ ಈ ಕಾಲದಲ್ಲಿ ಅಲ್ಲು ನಾನು ಮೋದಿ ಪರ ಪ್ರಚಾರ ಮಾಡಲು ಬಯಸುವೆ ಎಂದು ತನ್ನ ಅಭಿಮಾನವನ್ನು ತೋರಿಸಿದ್ದಾರೆ.
ಸೌತಡ್ಕ ಗಣೇಶ ಕಲಾ ಮಂದಿರದಲ್ಲಿ ನ.20ರಂದು ನಡೆದ ಇವರ ಮದುವೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜ ಹಾಗೂ ಇನ್ನಿತರ ಅತಿಥಿಗಳು ಆಗಮಿಸಿ ವಧು ವರರಿಗೆ ಶುಭಕೋರಿ ಮೋದಿ ಪರ ನಡೆಸಿದ ವಿಭಿನ್ನ ರೀತಿಯ ಪ್ರಚಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.