ಕುವೆಟ್ಟು: ಏರಂಗಲ್ಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ಕುವೆಟ್ಟು: ಏರಂಗಲ್ಲು ಅಂಗನವಾಡಿ ಕೇಂದ್ರದಲ್ಲಿ ನ.18 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಎಸ್.ಕೆ.ಎಸ್.ಎಸ್.ಎಫ್ ಮದ್ದಡ್ಕ ಯುನಿಟ್ ಅಧ್ಯಕ್ಷ ಇಲಿಯಾಝ್ ಚಿಲಿಂಬಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಎಸ್.ಕೆ.ಎಸ್.ಎಸ್.ಎಫ್ ಮದ್ದಡ್ಕ ಯುನಿಟ್ ವತಿಯಿಂದ ಏರಂಗಲ್ಲು ಅಂಗನವಾಡಿಗೆ ಟೇಬಲನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂಧರ್ಭದಲ್ಲಿ ಎಸ್‌.ಕೆ.ಎಸ್.ಎಸ್.ಎಫ್ ಪ್ರಧಾನ ಕಾರ್ಯದರ್ಶಿ ಶಾ ಮದ್ದಡ್ಕ, ಕೋಶಾಧಿಕಾರಿ ಇಸ್ಮಾಯಿಲ್ ಕಿಂಗ್ ಸ್ಟಾರ್, ಉಪಾಧ್ಯಕ್ಷ ಮನ್ಸೂರ್ ಪಾದೆ ಮತ್ತು ಅಂಗನವಾಡಿ ಶಿಕ್ಷಕಿ ಆಶಾಲತಾ, ಸಹಾಯಕಿ ಶೀಲಾವತಿ‌, ಆಶಾ ಕಾರ್ಯಕರ್ತೆ ಜಯಂತಿ ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here