ಧರ್ಮಸ್ಥಳ ಶ್ರೀ ಧ.ಮಂ.ಆಂ.ಮಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಮಕ್ಕಳ ದಿನಾಚರಣೆ ಮಹತ್ವವನ್ನು ಹಾಗೂ ವಿದ್ಯಾರ್ಥಿಗಳ ಕರ್ತವ್ಯವನ್ನು ವಿವರಿಸಿದರು.ಶಾಲಾ ಶಿಕ್ಷಕ ವೃಂದ ಹಾಡಿನ ಮೂಲಕ ಶುಭ ಹಾರೈಸಿದರು.ತದನಂತರ ನೆಹರೂ ಅವರ ಕುರಿತ ವಿಡಿಯೋ ಪ್ರದರ್ಶಿಸಿ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ವಿಜೇತರಾದವರಿಗೆ ಬಹುಮಾನವನ್ನು ಸಹ ವಿತರಿಸಲಾಯಿತು.ವಿದ್ಯಾರ್ಥಿಗಳಿಗೆ ಅವರ ಬದುಕಿಗೆ ಬೇಕಾದ ಅನೇಕ ಅಂಶವನ್ನು ಒಳಗೊಂಡ ಮಗಳು ಎಂಬ ಚಲನಚಿತ್ರವನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ಒಟ್ಟಾರೆಯಾಗಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

LEAVE A REPLY

Please enter your comment!
Please enter your name here