ನೆಲ್ಯಾಡಿ: ಕೌಕ್ರಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಭಾಗಿತ್ವದಲ್ಲಿ ನ್ಯೂ ವಿಸನ್ ಜನರೇಷನ್ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ 2.5 ಎನ್‌ವಿಜಿ ಸುರತ್ಕಲ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಇವರ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ನ.19ರಂದು ಬೆಳಿಗ್ಗೆ 9.30ರಿಂದ ಸಂಜೆ 3ರ ತನಕ ಕೌಕ್ರಾಡಿ-ಕೊಕ್ಕಡ ಸಂತಜಾನರ ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಕಣ್ಣಿನ ಕಂಪ್ಯೂಟರೀಕೃತ ಉಚಿತ ತಪಾಸಣೆ, 5 ರಿಂದ 15 ವರ್ಷದವರೆಗಿನ ಕಣ್ಣಿನ ತೊಂದರೆ ಇರುವ ಮಕ್ಕಳಿಗೆ ಶಿಬಿರದ ಪ್ರಯುಕ್ತ ಉಚಿತವಾಗಿ ಕನ್ನಡಕ ವಿತರಣೆ, ಸಮೀಪ ದೃಷ್ಟಿ ತೊಂದರೆ ಇರುವ ಅಗತ್ಯವುಳ್ಳವರಿಗೆ ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆ ಚಿಕಿತ್ಸೆಯ ಬಗ್ಗೆ ಮಾಹಿತಿ, ನೇತ್ರದಾನದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ
p>