


ಬಳಂಜ: ಬಳಂಜ ಗ್ರಾಮ ಪಂಚಾಯತ್ ನ ಮಹಿಳಾ ಗ್ರಾಮ ಸಭೆ ನ.10ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಶೋಭಾ ಮಾಧವ ಕುಲಾಲ್ ವಹಿಸಿದ್ದರು.
ಮಹಿಳೆಯರಿಗೆ ಸಂಬಂಧಿಸಿದ ಆರೋಗ್ಯ ಮಾಹಿತಿಯನ್ನು ಆರೋಗ್ಯ ಕಾರ್ಯಕರ್ತೆ ಮಮತಾ ಮತ್ತು ಸಮುದಾಯ ಆರೋಗ್ಯ ಅಧಿಕಾರಿ ಚೈತ್ರ ನೀಡಿದರು.

ಸ್ವಚ್ಛತಾ ಮಾಹಿತಿಯನ್ನು ಪಂಚಾಯತ್ ಅಭಿವೃದ್ದಿ ಅಧಿಕಾರಿ ಗಣೇಶ್ ಶೆಟ್ಟಿ ನೀಡಿದರು.ಮಹಿಳೆಯರಿಗೆ ಪಂಚಾಯತ್ ನಿಂದಾ ದೊರೆಯುವ ಸವಲತ್ತುಗಳ ಮಾಹಿತಿ ನೀಡಿದರು.ಮಹಿಳಾ ಸಬಲೀಕರಣ ಬಗ್ಗೆ ಸಂಜೀವಿನಿ ಯೋಜನೆಯ ತಾಲೂಕು ಸಂಯೋಜಕಿ ಮಾತನಾಡಿದರು.
ಸಭೆಯಲ್ಲಿ ಮಹಿಳೆಯರ ಕುಂದುಕೊರತೆಗಳ ಬಗ್ಗೆ ಪಟ್ಟಿ ಮಾಡಲಾಯಿತು.ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿಯೂ ಇನ್ಸೇನರೇಟರ್ ಅಳವಡಿಸಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಶಿಧರ ಶೆಟ್ಟಿ, ಸದಸ್ಯರಾದ ಹೇಮಂತ್, ಪದ್ಮಾವತಿ, ಪ್ರಸನ್ನ, ಯಕ್ಷಿತ ಉಪಸ್ಥಿತರಿದ್ದರು.ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಧನವತಿ ಹೆಗ್ಡೆ, ಒಕ್ಕೂಟದ ಪದಾಧಿಕಾರಿಗಳು, ತಾಲೂಕು ಸಂಯೋಜಕ ಸ್ವಸ್ತಿಕ್, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸ್ವಸಹಾಯ ಸಂಘಗಳ ಸದಸ್ಯರು, ಭಾಗವಹಿಸಿದ್ದರು.ಸಂಜೀವಿನಿ ಒಕ್ಕೂಟವು ಸ್ವಚ್ಚ ಸಂಜೀವಿನಿ ಘಟಕವನ್ನು ನಿರ್ವಹಿಸುತ್ತಿದ್ದು ಸ್ವಚ್ಛತಾ ಸೇವಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗಿತ್ತು.