

ಕೊಕ್ಕಡ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಕೊಕ್ಕಡ ಘಟಕ ಇದರ ನೂತನ ಪದಾಧಿಕಾರಿಗಳ ರಚನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ, ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಗೋ ರಕ್ಷಾ ಪ್ರಮುಖ್ ರಮೇಶ್ ಧರ್ಮಸ್ಥಳ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ ಪ್ರಖಂಡದ ಸಪ್ತಾಹಿಕ ಮಿಲನ್ ಪ್ರಮುಖ್ ಪ್ರಶಾಂತ್ ಕೊಕ್ಕಡ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ ಬಜರಂಗದಳ ಕೊಕ್ಕಡ ಘಟಕದ ನೂತನ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿ ಕೆ.ಪುರುಷೋತ್ತಮ, ಉಪಾಧ್ಯಕ್ಷರಾಗಿ ರವಿಚಂದ್ರ ಪುಡಿಕೇತ್ತೂರು, ಕಾರ್ಯದರ್ಶಿ ಶಶಿಧರ ಕೊಕ್ಕಡ, ಬಜರಂಗದಳ ಸಂಯೋಜಕರಾಗಿ ಶರತ್ ಕೊಕ್ಕಡ, ಸಹ ಸಂಯೋಜಕ ಸಂದೀಪ್ ಕೊಕ್ಕಡ, ಗೋ ರಕ್ಷಾ ಪ್ರಮುಖ್ ಪ್ರವೀಣ್ ಕೊಕ್ಕಡ, ಸತ್ಸಂಗ ಪ್ರಮುಖ ದೀಕ್ಷಿತ್ ಕೊಕ್ಕಡ, ಸುರಕ್ಷಾ ಪ್ರಮುಖ್ ಚರಣ್ ಬಳಕ್ಕ ವಿದ್ಯಾರ್ಥಿ ಪ್ರಮುಖ ನಿತಿನ್ ಕೊಕ್ಕಡ, ಪ್ರಚಾರ ಪ್ರಸಾರ ಪ್ರಮುಖ ಧನುಷ್ ಕೊಕ್ಕಡ ಆಯ್ಕೆಯಾದರು.