

ಬೆಳ್ತಂಗಡಿ: ವಾಣಿ ಆಂಗ್ಲಮಾಧ್ಯಮ ಶಾಲೆ ಹಳೆಕೋಟೆ ಇಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್‌ನ ಪ್ರಾಥಮಿಕ ವಿಭಾಗದ ಕಬ್ಸ್ ಮತ್ತು ಬುಲ್ ಬುಲ್ ದಳಗಳ ಉದ್ಘಾಟನಾ ಸಮಾರಂಭವು ನ.09ರಂದು ನೆರವೇರಿತು.
ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಮತ್ತು ಭಾರತ್ ಸ್ಕೌಡ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ಟಿ.ಜಯಾನಂದ ಗೌಡ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ತಿಳಿಸುವುದರೊಂದಿಗೆ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿಗಳಾಗಿ ಪ್ರಮೀಳಾ ಇವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಗೈಡ್ಸ್, ಕಬ್ಸ್ ಬುಲ್‌ಬುಲ್ ತಂಡದ ಬಗ್ಗೆ ಮಾರ್ಗದರ್ಶನ ನೀಡಿದರು.
ಸಮಾರಂಭದ ಅಧ್ಯಕ್ಷ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಲಕ್ಷ್ಮೀನಾರಾಯಣ ಕೆ. ಇವರು ರಾಜ್ಯ ಸಂಸ್ಥೆಯ ಆದೇಶದಂತೆ ಜಿಲ್ಲಾಸಂಸ್ಥೆಯಿಂದ ಬಂದಂತಹ ಧ್ವಜದ ಚೀಟಿ ಬಿಡುಗಡೆಗೊಳಿಸಿ, ಸ್ಕೌಟ್ಸ್ ಗೈಡ್ಸ್‌ನಲ್ಲಿ ಸಿಗುವ ಎಲ್ಲಾ ಸದಾವಕಾಶಗಳನ್ನು ಬಳಸಿಕೊಳ್ಳಬೇಕೆಂಬ ಆಶಯದೊಂದಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಸುಹಾಸಿನಿ, ಗೈಡ್ ಲೀಡರ್‌ಗಳಾದ ಶೋಭಾ ನವೀನ್, ಸುಮಲತಾ ಎ, ಕಬ್ ಮಾಸ್ಟರ್ ಕು|ಹೇಮಲತಾ ಮತ್ತು ಫ್ಲಾಕ್ ಲೀಡರ್ ನಮಿತಾ ಉಪಸ್ಥಿತರಿದ್ದರು.
ಸ್ಕೌಟ್ಸ್ ಗೈಡ್ಸ್ ದಳದ ವಿದ್ಯಾರ್ಥಿಗಳಾದ ಕು|ಮಾನ್ಯ ಮತ್ತು ಮಾ|ಕುಶನ್ ಕಾರ್ಯಕ್ರಮ ನಿರೂಪಿಸಿ, ಫ್ಲಾಕ್ ಲೀಡರ್ ನಮಿತಾ ಸ್ವಾಗತಿಸಿ, ಕಬ್ಸ್ ಮಾಸ್ಟರ್ ಹೇಮಲತಾ ವಂದಿಸಿದರು.