ಬೆಳ್ತಂಗಡಿ: ಮುಳಿಯದಲ್ಲಿ ‘ಮುಳಿಯ’ ಚಿನ್ನೋತ್ಸವ

0

ಬೆಳ್ತಂಗಡಿ: ಹತ್ತೂರಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ಪುತ್ತೂರಿನ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನ.10 ರಿಂದ 30ರ ವರೆಗೆ ಮತ್ತೆ ಮುಳಿಯ ಚಿನ್ನೋತ್ಸವಕ್ಕೆ ಸಜ್ಜಾಗಿದೆ.

ಈ ಬಾರಿಯ ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ-ಮುಳಿಯ ಚಿನ್ನೋತ್ಸವಕ್ಕೆ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಚಾಲನೆ ನೀಡಿದರು.

ಮುಖ್ಯ ಅತಿಥಿ ನೆಲೆಯಲ್ಲಿ ಪ್ರಗತಿಪರ ಕೃಷಿಕ ಸಂತೋಷ್‌ ಕುಮಾರ್ ಕಾಪಿನಡ್ಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಮುಳಿಯ ಮಾರ್ಕೆಟಿಂಗ್ ಕನ್ಸಲ್ವೆಂಟ್ ವೇಣು ಶರ್ಮ ಮುಳಿಯ ಸಂಸ್ಥೆಯ ಬಗ್ಗೆ ತಿಳಿಸಿದರು.

ಮುಳಿಯ ಸಂಸ್ಥೆಯ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು, ಬೆಳ್ತಂಗಡಿ ಮುಳಿಯ ಶಾಖಾ ವ್ಯವಸ್ಥಾಪಕ ಅಶೋಕ್ ಡಿ ಬಂಗೇರ ಸ್ವಾಗತಿಸಿದರು.ಉಪ ವ್ಯವಸ್ಥಾಪಕ ಲೋಹಿತ್ ಕುಮಾರ್ ವಂದಿಸಿದರು.ಮುಳಿಯ ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.

ವಿಶೇಷವಾಗಿ ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿರುವ ಮುಳಿಯ ಚಿನ್ನಾಭರಣಗಳ ಮಳಿಗೆಗಳಲ್ಲಿ ಈ ಉತ್ಸವ ಜರುಗುತ್ತಿದೆ.

ಮುಳಿಯ ಜ್ಯುವೆಲ್ಸ್‌ನಲ್ಲಿ ನಿಮ್ಮ ಆಯ್ಕೆಯ ಚಿನ್ನಾಭರಣವನ್ನು ಖರೀದಿಸಿ ಸಂಭ್ರಮಿಸಿ. ಜತೆಗೆ ಪ್ರತಿದಿನ ವಾಕ್ ಇನ್ ಆಗಿ ಬಹುಮಾನ ಗೆಲ್ಲಿರಿ ಎಂದು ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಮುಳಿಯ ಜ್ಯುವೆಲ್ಸ್ ಪ್ರಕಟಿಸಿದೆ.

ರೂ 1 ಲಕ್ಷಕ್ಕೂ ಅಧಿಕ ಮೌಲ್ಯದ ಖರೀದಿಗೆ ಕರ್ನಾಟಕದ ಕಾಶ್ಮೀರವೆಂದೇ ಖ್ಯಾತಿ ಪಡೆದ ಮಂಜಿನ ನಗರಿ ಮಡಿಕೇರಿಯಲ್ಲಿ ಒಂದು ದಿನ ಉಚಿತ ವಸತಿ ಸಹಿತ ಪ್ರವಾಸದ ಮೋಜನ್ನು ಪಡೆಯಬಹುದು ಎಂದು ಮುಳಿಯ ಜ್ಯುವೆಲ್ಸ್ ವಿಶೇಷ ಆಫರ್ ನೀಡುತ್ತಿದೆ.

ಮದುವೆ, ಉಪನಯನ, ಗೃಹಪ್ರವೇಶ, ಮಗುವಿನ ನಾಮಕರಣ, ಇತ್ಯಾದಿ ನಿಮ್ಮ ಸಮಾರಂಭಗಳಲ್ಲಿ ನಿಮ್ಮ ಸಂಭ್ರಮವನ್ನು ಹೆಚ್ಚಿಸಲು ಮುಳಿಯ ಜ್ಯುವೆಲ್ಸ್‌ನ ಚಿನ್ನೋತ್ಸವದಲ್ಲಿ ಭಾಗವಹಿಸಿ ಮೆಚ್ಚಿನ ಆಭರಣಗಳನ್ನು ಆಕರ್ಷಕ ಬೆಲೆಗಳಲ್ಲಿ ಖರೀದಿಸಬಹುದಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here