ಸರಳೀಕಟ್ಟೆ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಪದವೀಧರ ಪ್ರಾಥಮಿಕ ಶಿಕ್ಷಕಿಯಾಗಿ ಶಶಿರೇಖಾ ಪಿ.ಕೆ ನೇಮಕ

0

ಪುತ್ತೂರು: ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಇಲಾಖೆ 2022-23ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾದ ಪದವೀಧರ ಪ್ರಾಥಮಿಕ ಶಿಕ್ಷಕರ(6ರಿಂದ 8ನೇ ತರಗತಿ)ನ್ನು ವಿವಿಧ ಶಾಲೆಗಳಿಗೆ ನೇಮಕಾತಿ ಮಾಡಿ ಆದೇಶ ಹೊರಡಿಸಿದೆ. ಅದರಂತೆ ಶಶಿರೇಖಾ ಪಿ ಕೆ ಅವರು ಬೆಳ್ತಂಗಡಿ ತಾಲೂಕಿನ ಸರಳೀಕಟ್ಟೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಪದವೀಧರ ಪ್ರಾಥಮಿಕ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಪುತ್ತೂರು ತಾಲೂಕಿನ ಕಾಣಿಯೂರು ಗ್ರಾಮದ ಪುಣ್ಚತ್ತಾರು ನಿವಾಸಿ ಪುಟ್ಟು ಪಿ ಅವರ ಪುತ್ರಿಯಾಗಿರುವ ಶಶಿರೇಖಾ ಪಿ. ಕೆ. ಅವರು ಕಾಣಿಯೂರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ, ಕೋಡಿಂಬಾಡಿ ಬೊಬ್ಬೇಕೇರಿ, ಸರಕಾರಿ ಪ್ರೌಢಶಾಲೆ, ಕಾಣಿಯೂರು, ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಪುತ್ತೂರು ಸಂತಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು ಪುತ್ತೂರು ವಿವೇಕಾನಂದ ಬಿ.ಎಡ್. ಕಾಲೇಜಿನಲ್ಲಿ ಬಿ.ಎಡ್. ಪೂರೈಸಿದ್ದರು. ಪ್ರಸ್ತುತ ಶಶಿರೇಖಾ ಪಿ. ಕೆ. ಅವರು ಪುತ್ತೂರು ತಾಲೂಕಿನ ಪುಣ್ಚತ್ತಾರಿನಲ್ಲಿ ತಾಯಿ ಅವರೊಂದಿಗೆ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here