ಕೊಲ್ಲಿ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ರ ಅಧ್ಯಕ್ಷತೆಯಲ್ಲಿ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೋಕೇಶ್ ರಾವ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ರಾವ್ ಕಕ್ಕಿನೇಜಿ ಹಾಗೂ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವಿವಿಧ ಸಂಚಲನ ಸಮಿತಿಗೆ ಸಂಚಾಲಕ ಹಾಗೂ ಉಪಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.
ಸ್ವಾಗತ ಸಮಿತಿಗೆ ವಾಸುದೇವ ರಾವ್ ಕಕ್ಕಿನೇಜಿ, ಶೀನಪ್ಪ ಗೌಡ ನೆತ್ರಕೊಡಂಗೆ, ವಿನಯಚಂದ್ರ ನಡುಬೈಲು, ಉಗ್ರಾಣ ಸಮಿತಿಗೆ ರಮೇಶ್ ಗೌಡ ನಂದಿಲ, ಜತ್ತಣ್ಣ ಗೌಡ ಪುನ್ಕೆದಡಿ, ಹೊರಕಾಣಿಕೆ ಸಮಿತಿಗೆ ನಾರಾಯಣ ಗೌಡ, ಸತೀಶ್ ಗೌಡ, ಮೋಹನ ಕಿಲ್ಲೂರು , ಗಣೇಶ್ ಗೌಡ ಮಲ್ಲಿಗೆ ಮನೆ, ಅಶೋಕ್, ಮೋಹನ್ ಭಾಯಿತ್ಯಾರ್, ಗಂಗಾಧರ ಪರಾರಿ, ರಮೇಶ್ ಕೆಂಗಾe, ಪ್ರದೀಪ್ ನಾವೂರ, ಉದಯ್ ಬಂಗೇರ, ನಗರಾಲಂಕಾರ ಸಮಿತಿಗೆ ಅಭಿಜಿತ್ ವಳಚಿಲಬೆಟ್ಟು, ಜಯಂತ್ ಗೌಡ ಕೊಂಡಾಲ್, ಕಿರಣ್ ಕೊಡಿಯೇಲು, ಪಾರ್ಕಿಂಗ್ ವ್ಯವಸ್ಥೆ ಸಂಚಾಲಕರಾಗಿ ಶಿವಾನಂದ ಕಿಲ್ಲೂರು, ರಮೇಶ್ ಮಾಂಜ, ನೀರಾವರಿ ವ್ಯವಸ್ಥೆಗೆ ರತನ್ ಕಿಲ್ಲೂರು, ಡೀಕಯ್ಯ ದೇವಾಡಿಗ, ಭಜನಾ ಸಮಿತಿಗೆ ವಿಜಯ ಕಾಜೂರು, ಗಣೇಶ್ ಗೌಡ, ಪ್ರಮೀಳಾ ಮಾಲೂರು, ಸಾಂಸ್ಕೃತಿಕ ಸಮಿತಿಗೆ ಕೇಶವ ಪಡ್ಕೆ, ದಿನೇಶ್ ಗೌಡ ದಿಡುಪೆ, ಪ್ರಚಾರ ಸಮಿತಿಗೆ ದಾಸಪ್ಪ ಗೌಡ, ರತ್ನಾಕರ್ ನಾವೂರು, ಉದಯ್ ನಾವೂರ, ರಾಜೇಶ್ ಕಿಲ್ಲೂರು, ಸ್ವಚ್ಛತಾ ಸಮಿತಿಗೆ ರಾಜೇಶ್ ನಾಗುಂಡಿ, ರಮಾನಂದ ಮಾಲೂರು, ವೈದಿಕ ಸಮಿತಿಗೆ ಸುಬ್ರಮಣ್ಯ ರಾವ್, ಉಮೇಶ್ ರಾವ್ ಆಯ್ಕೆಗೊಂಡರು.
ಕಾರ್ಯಕ್ರಮವನ್ನು ವಿನಯಚಂದ್ರ ಸ್ವಾಗತಿಸಿ, ಧನಂಜಯ ರಾವ್ ವಂದಿಸಿದರು.