


ಕಳಿಯ: ನಾಗಶ್ರೀ ಮಕ್ಕಳ ಕುಣಿತ ಭಜನಾ ತಂಡದ ಗುರುಗಳಾದ ಅಶೋಕ್ ನಾಯ್ಕ್ ಕಳಸಬೈಲು ಇವರಿಗೆ ಶ್ರೇಷ್ಠ ಸಾಧಕ ಪ್ರಶಸ್ತಿ ಲಭಿಸಿದರಿಂದ ಕಳಿಯ ಕೊಜಪ್ಪಾಡಿ ನಾಗಬ್ರಹ್ಮ ಸನ್ನಿಧಿಯಲ್ಲಿ ನ.2ರಂದು ಪಂಚಮಿಯ ಪೂಜೆಯಂದು ನಾಗಶ್ರೀ ಭಜನಾ ತಂಡದಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.


ಸಭೆಯಲ್ಲಿ ನಾಗಬ್ರಹ್ಮ ಸೇವಾ ಟ್ರಸ್ಟಿನ ಅಧ್ಯಕ್ಷರು ಆನಂದ ಶೆಟ್ಟಿ ಐಸಿರಿ, ನಾಗಶ್ರೀ ಮಹಿಳಾ ಮಂಡಳಿಯ ಅಧ್ಯಕ್ಷರು ಶೋಭಾ ಸತೀಶ್, ನಾಗಶ್ರೀ ಭಜನಾ ತಂಡದ ಕಾರ್ಯದರ್ಶಿ ಪ್ರತಿಭಾ ಜಗನ್ನಾಥ್, ಊರವರು, ಮಕ್ಕಳು ಉಪಸ್ಥಿತರಿದ್ದರು







