ಉಜಿರೆ: ಅನುಗ್ರಹದಲ್ಲಿ ಆಕರ್ಷಣೆಯ ವಿಜ್ಞಾನ ವಸ್ತು ಪ್ರದರ್ಶನ

0

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ 2023-24ನೇ ಸಾಲಿನ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭವು ಶಾಲಾ ಸಂಚಾಲಕರಾದ ವಂ! ಫಾ! ಜೇಮ್ಸ್ ಡಿಸೋಜರವರ ಆಧ್ಯಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ನಡೆಯಿತು.ಮಕ್ಕಳ ಪ್ರಾರ್ಥನೆಯ ನಂತರ ರಕ್ಷಾ ಎಲ್ಲರನ್ನೂ ಸ್ವಾಗತಿಸಿದರು.

ಶಾಲಾ ಪ್ರಾಂಶುಪಾಲರಾದ ವಂ! ಫಾ! ವಿಜಯ್ ಲೋಬೋ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳು ತಮ್ಮ ಬೌದ್ಧಿಕ ಶಕ್ತಿಯನ್ನು ಹರಿತಗೊಳಿಸಿದಾಗ ಸಾಧನೆಯನ್ನು ಮಾಡಲು ಸಾಧ್ಯವೆಂದು ಹೇಳಿದರು. ಮುಂದಕ್ಕೆ ಸಾಂಕೇತಿಕವಾಗಿ ಚಂದ್ರಯಾನ-3 ರ ಉಡಾವಣೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಗಳಾದ ಡಾ! ಲಿಯೋನಾರ್ಡ್ ಕ್ಲಿಂಟನ್ ಡಿ’ಸೋಜ ರವರನ್ನು ಗೌರವಿಸಲಾಯಿತು.ಅವರು ಮಕ್ಕಳು ಎಳವೆಯಲ್ಲಿಯೇ ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಮುಂದೆ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವೆಂದು ಹೇಳಿದರು.

ಶಾಲಾ ಸಂಚಾಲಕರು ಅಧ್ಯಕ್ಷೀಯ ಭಾಷಣ ಮಾಡುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟನಿ ಫೆರ್ನಾಂಡೀಸ್ ಹಾಗೂ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಡಾ! ಪ್ರಶಾಂತ್ ಉಪಸ್ಥಿತರಿದ್ದರು.ವಿನಯಲತಾರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಭಾಕರ ಶೆಟ್ಟಿಯವರು ಧನ್ಯವಾದವನ್ನಿತ್ತರು.ತದನಂತರ ವಸ್ತು ಪ್ರದರ್ಶನ ವೀಕ್ಷಣೆಯು ನಡೆಯಿತು.ಸ್ಥಳೀಯ ಹಲವು ಶಾಲೆಗಳ ಮಕ್ಕಳು ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.

p>

LEAVE A REPLY

Please enter your comment!
Please enter your name here