ಬೆಳ್ತಂಗಡಿ: ನ.01ರಂದು ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಅದ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರು ಮತ್ತು ನಿರ್ದೇಶಕರು ಆದ ವಂದನೀಯ ಫಾದರ್ ವಿನೋದ್ ಮಸ್ಕರೇನ್ಹಸ್ ರವರು ಮಾತನಾಡಿ, ಕರ್ನಾಟಕದಲ್ಲಿ ನಾನಾ ರೀತಿಯ ಜಾತಿ, ಧರ್ಮ, ಭಾಷೆ, ಆಹಾರ ಪದ್ದತಿ ಇರುವ ಜನಾಂಗದವರು ವಾಸವಾಗಿದ್ದಾರೆ.ಸಾಹಿತ್ಯ, ಕಲಾ, ಐತಿಹಾಸಿಕ ಹಲವು ಕ್ಷೇತ್ರಗಳಲ್ಲಿ ಅನೇಕ ಕವಿಗಳು, ಸಾಹಿತಿಗಳು ತಮ್ಮ ಕೊಡುಗೆಯನ್ನು ನೀಡಿರುವಂತಹ ನಾಡಗಿದೆ.ಕನ್ನಡ ನಾಡು ಕಲೆ, ವಾಸ್ತುಶಿಲ್ಪಗಳ ಬೀಡಾಗಿದೆ ಎಂದು ಕನ್ನಡ ನಾಡಿನ ವಿಶೇಷತೆಯನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿಯಾದ ದಿವ್ಯ ಟಿ.ವಿ ರವರು ಹಾಗೂ ದಯಾ ವಿಶೇಷ ಶಾಲೆಯ ಮಕ್ಕಳು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಸಿಬ್ಬಂದಿಗಳು ಭಾಗಿಯಾಗಿದ್ದರು.
ದಯಾ ವಿಶೇಷ ಶಾಲೆಯ ವಿಶೇಷ ಮಕ್ಕಳು ನಾಡಗೀತೆ, ನೃತ್ಯವನ್ನು ಮಾಡಿದರು.ಕಾರ್ಯಾಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿ ಸ್ವಾತಿಯವರು, ವಂದನಾರ್ಪಣೆಯನ್ನು ಮುಖ್ಯ ಶಿಕ್ಷಕಿ ದಿವ್ಯರವರು ನೇರವೆರಿಸಿದರು.