ಕಳಿಯ: ಗ್ರಾಮ ಪಂಚಾಯತ್ ಕೃಷಿ ಇಲಾಖೆ ಹಾಗೂ ಜೇನು ಸಾಕಾಣಿಕೆ ಕೃಷಿಕರ ನೇತೃತ್ವದಲ್ಲಿ ಜೇನು ಕೃಷಿ ತರಬೇತಿ ಕಾರ್ಯಕ್ರಮ ಅ.31ರಂದು ಕಳಿಯ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಜರುಗಿತು.
ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷ ದಿವಾಕರ ಮೆದಿನ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕೃಷಿ ಇಲಾಖೆ, ತೋಟಗಾರಿಕೆ ವತಿಯಿಂದ ಸಿಗುವ ಸವಲತ್ತುಗಳನ್ನು ನಮ್ಮ ಗ್ರಾಮ ಪಂಚಾಯತು ವ್ಯಾಪ್ತಿಯ ಆರ್ಹ ಪಲಾನುಭವಿಗಳಿಗೆ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.
ಕೃಷಿಕರು ತರಬೇತಿಯನ್ನು ಪಡೆದು ಹೆಚ್ಚಿನ ಲಾಭ ಗಳಿಸ ಬೇಕು ಎಂದು ಹೇಳಿದ್ದರು.ಜೇನು ತರಬೇತಿ ಸಂಪನ್ಮೂಲ ವ್ಯಕ್ತಿಯಾಗಿ ಕಲ್ಲೇರಿ ಚಿಂತನಾ ಹನಿ ಬಿ ಫಾರ್ಮಾದ ಆಶೋಕ್ ರೈ ಜೇನು ಕೃಷಿ ಪ್ರಾತ್ಯಕ್ಷಿಕೆಯನ್ನು ನೀಡುವ ಜೊತೆಗೆ ಜೇನು ಕುಟುಂಬದ ನಿರ್ವಹಣೆ ಬಗ್ಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಇಂದಿರ ಬಿ.ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಬೆಳ್ತಂಗಡಿ ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆಂರ್ಬುಡ, ಬೆಳ್ತಂಗಡಿ ಕೃಷಿ ಇಲಾಖೆ ಜಲಾನಯನ ಸಹಾಯಕಿ ಪುಷ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳಿಯ ಗ್ರಾಮ ಪಂಚಾಯತ್ ನಿಕಟ ಪೂರ್ವ ಉಪಾಧ್ಯಕ್ಷೆ ಹೀಲಿ ಸದಸ್ಯೆ ಕುಸುಮ ಎನ್.ಬಂಗೇರ, ಮಾಜಿ ಅಧ್ಯಕ್ಷ ಕೇಶವ ಪೂಜಾರಿ ನಾಳ, ಟೆಲಿಕಾಂ ಇಲಾಖೆ ನಿವೃತ್ತ ಮೋಹನ ಗೌಡ, ನಾಳ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸೋಮಪ್ಪ ಗೌಡ ಕುಬಾಯ, ಸ್ಥಳೀಯ ಹಿರಿಯ ಕೃಷಿಕರಾದ ತೋಮಸ್ ಕೊರೆಯಾ, ಸದಾಶಿವ ನಾಯ್ಕ್, ಜೇನು ಕೃಷಿಕರು ಹಾಗೂ ಪಂಚಾಯತು ಸಿಬ್ಬಂದಿಗಳು ಭಾಗವಹಿಸಿದ್ದರು.