

ಶಿಬಾಜೆ: ಬೆಳ್ತಂಗಡಿ ತಾಲೂಕು, ಶಿಬಾಜೆ ಗ್ರಾಮದ ಜಯರಾಮ ಪೂಜಾರಿ ಮತ್ತು ವನಜ ದಂಪತಿಗಳ ಪುತ್ರ, ವಿರಾಜ್ ಜೆ ಪೂಜಾರಿ ಯವರು ವಿಧ್ಯಾಭಾರತಿ ಕರ್ನಾಟಕ ಆಗಷ್ಟ್ ನಲ್ಲಿ ಕಲ್ಲಡ್ಕದಲ್ಲಿ ನಡೆಸಿದ ರಾಜ್ಯಮಟ್ಟದ ಚೆಸ್ ಚಾಂಪಿಯನ್ ನಲ್ಲಿ (ತರುಣ ವರ್ಗ) ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದ ಚೆಸ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿರುತ್ತಾರೆ.

ಅರುಣಾಚಲ ಪ್ರದೇಶದಲ್ಲಿ “ವಿದ್ಯಾಭಾರತಿ ಅಖಿಲ ಭಾರತಿಯ ಶಿಕ್ಷಾ ಸಂಸ್ಥಾನ್” ಇದೇ ಅಕ್ಟೋಬರ್ 26ರಿಂದ 30ರವರೆಗೆ ನಡೆಸುವ 34ನೇ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಲಿದ್ದಾರೆ.