ಅರಸಿನಮಕ್ಕಿ ನವಶಕ್ತಿ ಆಟೋ ಚಾಲಕರ ಮತ್ತು ಮಾಲಕರ ಸಂಘ ಹಾಗೂ ದಾನಿಗಳ ನೆರವಿನಿಂದ ನವಶಕ್ತಿ ಆಂಬ್ಯುಲೆನ್ಸ್ ಸೇವೆಗೆ ಚಾಲನೆ

0

ಅರಸಿನಮಕ್ಕಿ: ನವಶಕ್ತಿ ಆಟೋ ಚಾಲಕರ ಮತ್ತು ಮಾಲಕರ ಸಂಘ ಅರಸಿನಮಕ್ಕಿ ಹಾಗೂ ದಾನಿಗಳ ನೆರವಿನಿಂದ ಖರೀದಿಸಿದ ನವಶಕ್ತಿ ಆಂಬ್ಯುಲೆನ್ಸ್ ಗೆ ವರದಶಂಕರ್ ದಾಮ್ಲೆ ಪೂಜೆ ನೆರವೇರಿಸಿ ಸಂಘದ ಕಾರ್ಯದರ್ಶಿ ದಯಾನಂದ ಗೌಡ ಉಡ್ಯೆರೆ ಚಾಲನೆ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು.

ಅರಸಿನಮಕ್ಕಿಗೆ ಅತ್ಯವಶ್ಯಕವಾದ ಈ ಆಂಬ್ಯುಲೆನ್ಸ್: ಅತೀ ಹೆಚ್ಚು ಜನ ವ್ಯವಹರಿಸುವ ಮತ್ತು 3 ಗ್ರಾಮಗಳ ಕೊಂಡಿಯಂತಿರುವ ಅರಸಿನಮಕ್ಕಿ ಗೆ ಈ ಸೇವೆ ಅತೀ ಅವಶ್ಯ ಶಿಶಿಲ, ಶಿಬಾಜೆ, ಹತ್ಯಡ್ಕ, ಶಿಬರಾಜೆ, ರೆಕ್ಯ,ಭಾಗದ ಜನರಿಗೆ ಏನೇ ಸಮಸ್ಯೆ ಆದರೂ ಕೊಕ್ಕಡದಿಂದ ಆಂಬ್ಯುಲೆನ್ಸ್ ಸೇವೆ ಪಡೆಯಬೇಕಿತ್ತು ಅದು ಬೇಕಾದ ಸಮಯದಲ್ಲಿ ಸಿಗದ ಕಾರಣ ಆಟೋ ಮೂಲಕ ರೋಗಿಯನ್ನು ಸಾಗಿಸಬೇಕಿತ್ತು. ಇದೆಲ್ಲ ಸಮಸ್ಯೆಯನ್ನು ಮನಗಂಡ ನವಶಕ್ತಿ ಆಟೋ ಚಾಲಕರು ತಮ್ಮ ನಿಲ್ದಾಣದ ಬಳಿಯೇ ಈ ಸೇವೆ ಇದ್ದರೆ ನುರಿತ ಆಂಬ್ಯುಲೆನ್ಸ್ ಚಾಲಕರು ನಮ್ಮ ಬಳಿಯೇ ಇರುವುದರಿಂದ ಸಾರ್ವಜನಿಕರಿಗೆ ಸೇವೆ ನೀಡಲು ಸುಲಭ ಎಂದು ಹಲವಾರು ದಾನಿಗಳ ಸಹಕಾರ ದಿಂದ ಸುಮಾರು 4.25 ಲಕ್ಷ ವೆಚ್ಚದಲ್ಲಿ ಆಕ್ಸಿಜನ್ ಒಳಗೊಂಡ ಸುಸಜ್ಜಿತ ಆಂಬ್ಯುಲೆನ್ಸ್ ಖರೀದಿ ಮಾಡಿ ಅಧಿಕೃತವಾಗಿ ಸೇವೆ ಆರಂಭಿಸಿದರು.

ದಿನದ 24 ಗಂಟೆಯೂ ಸೇವೆ ಲಭ್ಯ: ಆಂಬ್ಯುಲೆನ್ಸ್ ಸೇವೆ ದಿನದ24 ಗಂಟೆಯೂ ಲಭ್ಯ ಗರ್ಭಿಣಿಯರಿಗೆ ಮತ್ತು ಬಡವರಿಗೆ ವಿಶೇಷ ರಿಯಾಯಿತಿ ದರದಲ್ಲಿ ಸೇವೆ ಲಭ್ಯ, ಅನುಭವಿ ಡ್ರೈವರ್ ಗಳಿಂದ ಸೇವೆ ಎಂದು ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿಗಾರ್ ಕಾಪಿನಡ್ಕ ತಿಳಿಸಿದರು.

ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅರಸಿನಮಕ್ಕಿ ಗ್ರಾ.ಪಂ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂಎಸ್,ಸಿ ಎ ಬ್ಯಾಂಕ್ ನಿರ್ದೇಶಕರಾದ ಧರ್ಮರಾಜ ಗೌಡ ಆಡ್ಕಾಡಿ, ಡಾ.ಹರ್ಷಿತಾ ಸುವೀನ್,ಜಯರಾಂ ನೆಲ್ಲಿತ್ತಾಯ (ಶ್ರೀ ಕ್ಷೇ ಧ ಗ್ರಾ ಯೋಜನೆಯ ಪ್ರಾದೇಶಿಕ ನಿರ್ದೇಶಕರು), ಉಪಸ್ಥಿತರಿದ್ದು ಅಭಿಪ್ರಾಯ ವ್ಯಕ್ತಪಡಿಸಿದರು.

HM ಟ್ರೇಡರ್ಸ್ ಮಾಲಕರಾದ ಹಮೀದ್, ಹಾಗೂ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿಗಾರ್ ಕಾಪಿನಡ್ಕ, ಉಪಾಧ್ಯಕ್ಷರಾದ ನವೀನ್ ರೈ ಗೋಳಿತ್ತಡಿ,ಕಾರ್ಯದರ್ಶಿಯಾದ ದಯಾನಂದ ಗೌಡ, ಜೊತೆ ಕಾರ್ಯದರ್ಶಿ ಯು.ಸಿ ಕುಲಾಲ್ ಕೋಶಾಧಿಕಾರಿ ರಾಕೇಶ್ ಶೆಟ್ಟಿ ಹಾಗೂ ಎಲ್ಲಾ ಸಂಘದ ಸದಸ್ಯರು ದಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಅತಿಥಿಗಳನ್ನು ಪರಮೇಶ್ವರ ಪೂಜಾರಿ ಸ್ವಾಗತಿಸಿ ಕಿಶೋರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

p>

LEAVE A REPLY

Please enter your comment!
Please enter your name here