ಬೆಳ್ತಂಗಡಿ: ವಾಟ್ಸಾಪ್‌ನಲ್ಲಿ ವೀಡಿಯೋ ಕಾಲ್ ಮೂಲಕ ಮಾತನಾಡಿದ ವೇಳೆಯ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಜೀವ ಬೆದರಿಕೆ ಒಡ್ಡಿದ ಆರೋಪದಡಿ ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಕಾಪಿನಡ್ಕ ನಿವಾಸಿ ಕೆ.ಕೆ. ರಾಜಾ ಎಂಬಾತನ ವಿರುದ್ಧ ಮಹಿಳೆಯೋರ್ವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಕಾಪಿನಡ್ಕ ನಿವಾಸಿ ಕೆ.ಕೆ ರಾಜಾ ಎಂಬ ವ್ಯಕ್ತಿ ತನ್ನ ಪರಿಚಯಸ್ಥ ಮಹಿಳೆಗೆ ವೀಡಿಯೋ ಕಾಲ್ ಮಾಡುತ್ತಿದ್ದ.
ಆ ಮೂಲಕ ಆಕೆಯ ಫೋಟೋ ಪಡೆದು ಅದನ್ನು ಆಶ್ಲೀಲವಾಗಿ ಎಡಿಟ್ ಮಾಡಿ ಮೇ.29ರಂದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದ.ಇದನ್ನು ಮಹಿಳೆ ಗಮನಿಸಿರಲಿಲ್ಲ.
ಬಳಿಕ ಮಹಿಳೆಗೆ ಕರೆ ಮಾಡಿ ದೈಹಿಕ ಸಂಪರ್ಕಕ್ಕೆ ಬರುವಂತೆ ಒತ್ತಾಯಿಸಿದ್ದ.ಇಲ್ಲದಿದ್ದಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿರುವ ವೇಳೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.ಆತನ ಭಯದಿಂದ ಈ ವಿಚಾರವನ್ನು ಮಹಿಳೆ ಮನೆಯವರಲ್ಲಿ ತಿಳಿಸಿರಲಿಲ್ಲ.ದೈಹಿಕ ಸಂರ್ಪಕ್ಕೆ ಸಹಕರಿಸದೆ ಇದ್ದಲ್ಲಿ ಆಶ್ಲೀಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಾನ ಕಳೆಯುವುದಾಗಿ ಬೆದರಿಕೆ ಹಾಕಿದ್ದ.
ಇದರಿಂದ ಭಯಗೊಂಡ ಮಹಿಳೆ ತನ್ನ ತಾ ಮತ್ತು ತಮ್ಮನಿಗೆ ವಿಚಾರ ತಿಳಿಸಿದ್ದರು.ರಾಜಾ ಪದೇ ಪದೇ ರಾತ್ರಿ 9 ಗಂಟೆಯ ಬಳಿಕ ಮಹಿಳೆಯನ್ನು ನಾರಾಯಣಗುರು ಮಂದಿರಕ್ಕೆ ಬರುವಂತೆ ಒತ್ತಾಯಿಸುತ್ತಿದ್ದ.
ಅಲ್ಲದೆ ವೀಡಿಯೋ ಕಾಲ್ ಮಾಡಿ ಬೆದರಿಕೆ ಹಾಕಿದ್ದ.ನೀನು ಮಾತನಾಡದೇ ಇದ್ದಲ್ಲಿ ನದಿಗೆ ಬಿದ್ದು ಸಾಯುಸುವುದಾಗಿ ಬೆದರಿಸಿದ್ದ ಎಂದು ಧರ್ಮಸ್ಥಳ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.