ಬೆಳ್ತಂಗಡಿ: ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಕೃಷಿ ಸಚಿವರಾದ ಚೆಲುವರಾಯ ಸ್ವಾಮಿ ಭೇಟಿ ನೀಡಿದರು. ಧರ್ಮಸ್ಥಳದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸುವ ವೇಳೆ ಭೇಟಿ ನೀಡಿದ್ದು, ಈ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ವೇಣೂರು, ಬಜಿರೆ ಮುಂತಾದೆಡೆ ಆಫ್ರಿಕನ್ ಬಸವನಹುಳುವಿನ ಸಮಸ್ಯೆಯಿದೆ.ಇದಕ್ಕೆ ಪರಿಹಾರ ನೀಡಬೇಕು.ಬೆಳ್ತಂಗಡಿಯಲ್ಲಿ ಬೀಜೋತ್ಪನ್ನ ಕೇಂದ್ರಕ್ಕೆ ಪುನಶ್ಚೇತನಗೊಳಿಸಬೇಕು.ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಯಾವುದೇ ಚಟುವಟಿಕೆ ಇಲ್ಲದೇ ಪಾಳುಬಿದ್ದಿದೆ.ಪರಿಶಿಷ್ಟ ಜಾತಿ ಪಂಗಡದವರಿಗೆ ಕೃಷಿಯೋಗ್ಯ ಭೂಮಿಗಳಿಗಾಗಿ ಕಿಂಡಿ ಅಣೆಕಟ್ಟು ಹೆಚ್ಚಿಸಬೇಕು.ಬೆಳ್ತಂಗಡಿಯಲ್ಲಿ 25ರಲ್ಲಿ 23 ಹುದ್ದೆ ಖಾಲಿಯಿದೆ ಅದನ್ನು ನೇಮಕಾತಿಗೊಳಿಸಬೇಕು.ನಮ್ಮ ಭಾಗದಲ್ಲಿ ಆನೆ ಹಾವಳಿಯಿಂದಾಗಿ ತೊಂದರೆಯಾಗುತ್ತಿದೆ. ಇದಕ್ಕೆ ಸೂಕ್ತ ಕ್ರಮಕ್ಕೆ ರಕ್ಷಿತ್ ಶಿವರಾಂ ವಿನಂತಿಸಿದರು.
ಇದಕ್ಕುತ್ತರಿಸಿದ ಸಚಿವ ಚೆಲುವರಾಯ ಸ್ವಾಮಿ”ರಕ್ಷಿತ್ ರವರು ಹೇಳಿದ ವಿಚಾರಗಳಲ್ಲಿ ಕೂಡಲೇ ಮಾಡಬಹುದಾದ ಕೆಲಸಗಳನ್ನು ಶೀಘ್ರ ಮಾಡಲಾಗುವುದು.ಕೃಷಿ ಭಾಗ್ಯ ಯೋಜನೆ ಮತ್ತೆ ಜಾರಿಗೊಳಿಸ್ತೇವೆ.ಕೆಲವೊಂದು ತೋಟಗಾರಿಕೆ ಇಲಾಖೆಗೆ ಬರುತ್ತದೆ.ಅದರ ಬಗ್ಗೆ ಆಯಾ ಇಲಾಖೆಗೆ ತಿಳಿಸುತ್ತೇವೆ. ನಿಮ್ಮ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತೇನೆ. ಯಾವುದೇ ಇಲಾಖೆಗಳಿದ್ದರೂ ಅವರ ಗಮನಕ್ಕೆ ತರುತ್ತೇನೆ.ನೀವು ಬೆಂಗಳೂರಿಗೆ ಬಂದಾಗ, ನಾವು ಜಿಲ್ಲಾ ಕೇಂದ್ರಗಳಿಗೆ ಬಂದಾಗ ಕಾರ್ಯಕರ್ತರ ಸಮಸ್ಯೆಗಳ ಬಗ್ಗೆ ಗಮನ ಕೊಡಿ.ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸಚಿವರನ್ನು ಸನ್ಮಾನಿಸಲಾಯಿತು.
ಈ ವೇಳೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳಾದ ಸತೀಶ್ ಕಾಶಿಪಟ್ಣ,ನಾಗೇಶ್ ಕುಮಾರ್, ಮುಖಂಡರುಗಳಾದ ಶೇಖರ್ ಕುಕ್ಕೇಡಿ, ಧರಣೇಂದ್ರ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.