ರೆಖ್ಯ: ರೆಖ್ಯ ಗ್ರಾಮದ ಎನ್.ಎಚ್.75ರ ಲಾವತ್ತಡ್ಕ ಎಂಬಲ್ಲಿ ಅಕ್ರಮವಾಗಿ ಅಕೇಷಿಯ ಮತ್ತು ಮ್ಯಾಜಿಯಂ ಮಿಶ್ರಿತ ಬಿಲ್ಲೆಟ್ಸ್ ನ್ನು ಸಾಗಾಟ ಮಾಡುತ್ತಿದ್ದ ಕೆಎ21 ಬಿ 3478 ಸಂಖ್ಯೆಯ ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ರವರ ಮಾರ್ಗದರ್ಶನದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಕೊಕ್ಕಡ ಗ್ರಾಮದ ಆರೋಪಿ ಸಾಹುಲ್ ಹಮೀದ್ ಇವರು ಪರಾರಿಯಾಗಿರುತ್ತಾರೆ.
ಕಾರ್ಯಾಚರಣೆಯಲ್ಲಿ ರೆಖ್ಯ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ತಡ್ಲಗಿ, ಬೀಟ್ ಫಾರೆಸ್ಟರ್‌ಗಳಾದ ನಿಂಗಪ್ಪ ಅವಾರಿ, ಸುನೀಲ್ ನಾಯ್ಕ್ ಭಾಗವಹಿಸಿದ್ದರು.
ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 50, 62 ಮತ್ತು 71 ಎ ಮತ್ತು ಕರ್ನಾಟಕ ಫಾರೆಸ್ಟ್ ನ ನಿಯಮ 144, 165 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
p>