

ನ್ಯಾಯತರ್ಪು ಗ್ರಾಮದ ನಾಳ ದೇವಿನಗರ ಜನತಾ ಕಾಲೋನಿಯ ನಿವಾಸಿ ಅಂಬಿಕಾರವರ ಮನೆಗೆ ಸಿಡಿಲು ಬಡಿದು ಅಪಾರ ನಷ್ಟ ಉಂಟಾಗಿದೆ.
ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮೆದಿನ, ಸದಸ್ಯರಾದ ಸುಧಾಕರ ಮಜಲು, ಮಾಜಿ ಅಧ್ಯಕ್ಷ ಕೇಶವ ಪೂಜಾರಿ ನಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ್, ಗ್ರಾಮಾಧಿಕಾರಿ ಪೃಥ್ವಿರಾಜ್ ಶೆಟ್ಟಿ, ಗ್ರಾಮ ಸಹಾಯಕ ಸ್ಟೇನಿ ಲೋಬೋ, ಕಳಿಯ ಸಿ.ಎ.ಬ್ಯಾಂಕ್ ನಿರ್ದೇಶಕ ಶಶಿಧರ ಶೆಟ್ಟಿ ಹಾಗೂ ಗ್ರಾಮಸ್ಥರು ಭೇಟಿ ನೀಡಿದರು.
ಮನೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ನಷ್ಟು ಉಂಟಾಗಿದೆ ಎಂದು ಅಧಿಕಾರಿಗಳು ಹಾಗೂ ಸ್ಥಳೀಯರು ತಿಳಿಸಿದರು.

ಪಕ್ಕದ ಪುಷ್ಪಾವತಿ ಶಂಕರ್ ಶೆಟ್ಟಿ ಅವರ ಮನೆಯಲ್ಲಿ ಸಿಡಿಲಿನ ರಭಸಕ್ಕೆ ಟಿವಿ, ಫ್ಯಾನ್, ವಿದ್ಯುತ್ ಉಪಕರಣಗಳಿಗೆ ತುಂಬಾ ಹಾನಿಯಾಗಿವೆ.

ಕೃಷ್ಣಪ್ಪ ಪೂಜಾರಿಯವರ ಮನೆಯ ಹಂಚಿನ ಮೇಲ್ಛಾವಣಿಯ ಸುಮಾರು 25 ಹಂಚು ಪುಡಿ-ಪುಡಿಯಾಗಿವೆ.