ಅಂಡಿಂಜೆ: ಗ್ರಾ.ಪಂ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ಶಿಬಿರ

0

ಅಂಡಿಂಜೆ: ಎಸ್.ಎನ್.ಮೂಡುಬಿದ್ರೆ ಪಾಲಿಟೆಕ್ನಿಕ್ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವು ಅ.12ರಂದು ಅಂಡಿಂಜೆ ಗ್ರಾಮ ಪಂಚಾಯತ್ ಆವರಣದಲ್ಲಿ ಸ್ವಚ್ಛತಾ ಶಿಬಿರವನ್ನು ಏರ್ಪಡಿಸಲಾಯಿತು.

ಈ ಶಿಬಿರದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ವೇತಾ, ಗ್ರಾ.ಪಂ.ಸದಸ್ಯರು, ಅಂಡಿಂಜೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಶಿವಶಂಕರ್ ಭಟ್, ಪಂ.ಅ.ಅಧಿಕಾರಿ ರಾಘವೇಂದ್ರ ಪಾಟೀಲ್, ಕಾರ್ಯದರ್ಶಿ ಚಂಪಾ, ಗ್ರಾಮಕರಣಿಕರಾದ ಅಕ್ಷತ್, ಶಿಬಿರದ ಅಧಿಕಾರಿಗಳಾದ ರಾಮ್ ಪ್ರಸಾದ್.ಎಂ, ಗೋಪಾಲಕೃಷ್ಣ.ಕೆ.ಎಸ್., ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

ಅಂಡಿಂಜೆ ಗ್ರಾಮ ಪಂಚಾಯತ್ ಸಿಬ್ಬಂದಿ ಶೀನ.ಕೆ ಇವರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here