ಅ.15-24: ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಕೊಕ್ಕಡ: ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಟ್ರಸ್ಟ್ ಕೃಷ್ಣಮೂರ್ತಿ ಹೇಳಿದರು. ನವರಾತ್ರಿ ನಿರ್ವಹಣಾ ಸಮಿತಿ ಕಾವು ಕೌಕ್ರಾಡಿ ಕೊಕ್ಕಡ ಇದರ ವತಿಯಿಂದ ದಿನಾಂಕ 15-10-2023ನೇ ರವಿವಾರದಿಂದ 24-10-2023 ಮಂಗಳವಾರ ದಶಮಿವರೆಗೆ ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವವು ಜರಗಲಿದೆ.

ಈ ಸಂದರ್ಭ ಪ್ರತಿ ದಿನ ಸಂಜೆ 6.30ರಿಂದ ರಂಗಪೂಜೆ ಹಾಗೂ ಪ್ರತೀ ಮಂಗಳವಾರ ಮತ್ತು ಶುಕ್ರವಾರ ದುರ್ಗಾ ಪೂಜೆ ಮತ್ತು ಮಹಾಪೂಜೆ ಹಾಗೂ ದಿನಾಂಕ 16-10-2023ರಂದು ರಜತ ಕವಚ ಸಮರ್ಪಣೆ ಮತ್ತು ಚಂಡಿಕಾ ಹೋಮ ನಡೆಯಲಿದೆ.

ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here