ತಾಲೂಕಿನೆಲ್ಲೆಡೆ ಗಾಳಿ, ಸಿಡಿಲು, ಗುಡುಗು ಸಹಿತ ಮಳೆ-ಮುಂಡಾಜೆ ಪರಿಸರದಲ್ಲಿ ಭಾರಿ ಹಾನಿ

0

ಬೆಳ್ತಂಗಡಿ: ತಾಲೂಕಿನಲ್ಲಿ ಸೋಮವಾರ ಸಂಜೆ ಸಿಡಿಲು, ಗುಡುಗು, ಗಾಳಿ ಸಹಿತ ಉತ್ತಮ ಮಳೆ ಸುರಿದಿದೆ.ಪರಿಣಾಮ ರಾಷ್ಟ್ರೀಯ ‌ಹೆದ್ದಾರಿ ಪುಂಜಾಲಕಟ್ಟೆ-ಚಾರ್ಮಾಡಿವರೆಗೆ ಕಾಮಗಾರಿ ನಡೆಯುತ್ತಿದ್ದು, ಮಳೆ ನೀರು ಮುಂಡಾಜೆಯ ಸೋಮಂತಡ್ಕದ ಪೇಟೆಯ ಕೆಲವು ಅಂಗಡಿ, ಮನೆಗಳಿಗೆ ನುಗ್ಗಿದೆ.

ಸೋಮಂತಡ್ಕ-ದಿಡುಪೆ ರಸ್ತೆಯಲ್ಲಿ ಮರ ಒಂದು ಉರುಳಿ ಬಿದ್ದು ವಿದ್ಯುತ್ ಕಂಬ ಧರಾಶಾಯಿಯಾಗಿ ಕೆಲ ಹೊತ್ತು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು.ಈ ಭಾಗದಲ್ಲಿ ವಿದ್ಯುತ್ ಪೂರೈಕೆಯು ಸ್ಥಗಿತಗೊಂಡಿದೆ.
ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಅಂಬಡ್ತ್ಯಾರು ಎಂಬಲ್ಲಿ ಮರ ರಸ್ತೆಗೆ ಉರುಳಿ ಕೊಂಚ ಹೊತ್ತು ಸಂಚಾರ ವ್ಯತ್ಯಯವಾಯಿತು.ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯವರ ಜೆಸಿಬಿ ಮೂಲಕ ಮರ ತೆರೆವುಗೊಳಿಸಿ ಸುಗಮ ಸಂಚಾರಕ್ಕೆ ಕಾನೂನು ಮಾಡಿಕೊಡಲಾಯಿತು.ಮರ ಬಿದ್ದ ಪರಿಣಾಮ ಮುಂಡಾಜೆ-ಕಾಯರ್ತೋಡಿ ವಿದ್ಯುತ್ ಲೈನ್ ನ ತಂತಿ ತುಂಡಾಗಿದ್ದು ನೂರಾರು ಮನೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಸೋಮಂತಡ್ಕ-ಅಗರಿ ರಸ್ತೆಯಲ್ಲಿ ಮರ ಬಿದ್ದು ಸಂಚಾರ ವ್ಯತ್ಯಯ ಉಂಟಾಯಿತು.ಸೋಮಂತಡ್ಕ ಪಂಚಾಯತ್ ಸಮೀಪ ವಾಸವಿರುವ ಬಾಲಕೃಷ್ಣ ಪೂಜಾರಿ ಎಂಬವರ ವಾಸದ ಮನೆಯ ಹದಿನೈದು ಶೀಟುಗಳು ಗಾಳಿಗೆ ಹಾರಿಹೋಗಿವೆ.

ಫಿಲತ್ತಡ್ಕ ಎಂಬಲ್ಲಿ ರಮಾನಂದ ಎಂಬವರ ಮನೆಯ ವಿದ್ಯುತ್ ಪರಿಕರಗಳಿಗೆ ಸಿಡಿಲು ಬಡಿದಿದ್ದು ಹಾನಿ ಉಂಟಾಗಿದೆ.ಮುಂಡಾಜೆ ಗ್ರಾಮದ ಮುಂಡಾಲಬೆಟ್ಟು ಸುರೇಶ ಗೌಡ ಎಂಬವರ ಮನೆಗೆ ಸಿಡಿಲು ಬಡಿದು ಲಕ್ಷಾಂತರ ರೂ.ಮೌಲ್ಯದ ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದ್ದು, ವಯರಿಂಗ್ ಕೂಡ ಸುಟ್ಟುಹೋಗಿದೆ.ಮನೆಯ ಗೋಡೆಯು ಬಿರುಕು ಬಿಟ್ಟಿದ್ದು ಕಂಪೌಂಡ್ ಕುಸಿದಿದೆ.

ಮುಂಡಾಜೆ, ಕಡಿರುದ್ಯಾವರ, ಕಕ್ಕಿಂಜೆ, ಚಾರ್ಮಾಡಿ ವಿಪರೀತ ಗುಡುಗು ಸಹಿತ ಮಳೆಯಾಗಿದ್ದು, ರಸ್ತೆಗಳೆಲ್ಲ ನೀರು ತುಂಬಿ ಕೆರೆಯಂತಾಗಿದ್ದವು.

LEAVE A REPLY

Please enter your comment!
Please enter your name here