


ಪುದುವೆಟ್ಟು: ಬ್ಲಾಕ್ ಕಾಂಗ್ರೆಸ್ ಪುದುವೆಟ್ಟು ಇಲ್ಲಿಯ 167 ರ ವಾರ್ಡ್ ಸಭೆಯು ಮಿಯಾರು ಕೃಷಿ ಪತ್ತಿನ ಸಬಾ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪುದುವೆಟ್ಟು ಗ್ರಾಮ ಸಮಿತಿಯ 167 ವಾರ್ಡ್ ಪುನರ್ ರಚನೆ ಹಾಗೂ ವಾರ್ಡ್ ಸಮಿತಿಯಿಂದ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ನೂತನ ಅದ್ಯಕ್ಷರಾಗಿ ನೇಮಕವಾದ ಕೆ.ಎಂ.ನಾಗೇಶ್ ಕುಮಾರ್ ಗೌಡ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ನಮಿತಾ ತೋಟತ್ತಾಡಿ ಇವರಿಗೆ ಸನ್ಮಾನ ಕಾರ್ಯಕ್ರಮ ಮಿಯಾರು ಕೃಷಿ ಪತ್ತಿನ ಸಬಾ ಭವನದಲ್ಲಿ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಮುಖಂಡರಾದ ಎಂ.ಏಚ್.ಮುಹಮ್ಮದ್ ಕಲಂದರ್ ಶಾ ಕೊಕ್ಕಡ, ಪುದುವೆಟ್ಟು ಬ್ಲಾಕ್ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರಾದ ಅಝೀಝ್, 167 ವಾರ್ಡ್ ಸಮಿತಿ ಅಧ್ಯಕ್ಷರಾದ ಸೋಮನಾಥ ಗೌಡ, ಪ್ರದಾನ ಕಾರ್ಯದರ್ಶಿ ನಾರಾಯಣ ಪಿಲಿಕ್ಕಲ, ಹಾಗೂ ಬೊಮ್ಮಣ್ಣ ಗೌಡ, ಸಂತೋಷ್ ಕೆಸಿ ಹಾಗೂ ಹಲವಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಗೆ ಡಯಾನಾ ಇವರು ಧನ್ಯವಾದ ಸಮರ್ಪಿಸಿದರು.