ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳು ಹಲವು ಬಹುಮಾನ

0

ಉಜಿರೆಯ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ಅಕ್ಟೋಬರ್ 7 ರಂದು ನಡೆದ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ಲೆವಿನ್ ಡಿಕೋಸ್ತ (9ನೇ) 400 ಮೀ ಓಟದಲ್ಲಿ ಪ್ರಥಮ ಸ್ಥಾನ, ಕರಣ್ (9ನೇ) ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, ವೈಷ್ಣವಿ(9ನೇ) ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, ದೀಪ್ತಿ (10ನೇ ) ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ, ಪ್ರಣೀತ್ ಮೋರಸ್ (10ನೇ ), ಲೆವಿನ್ ಡಿಕೋಸ್ತ (9ನೇ), ಮಹಮ್ಮದ್ ಅಫ್ಝಲ್ (10ನೇ ), ಪ್ರಜ್ಜೇಶ್ ವೈ (9ನೇ) ರಿಲೇಯಲ್ಲಿ ತೃತೀಯ ಸ್ಥಾನ ಹಾಗೂ ಸ್ವೀಡಲ್ ವಾಸ್ (10ನೇ ), ವೈಷ್ಣವಿ (9ನೇ), ದೀಪ್ತಿ (10ನೇ ) , ಮತ್ತು ವಿಯೋನ ರೇಗೊ(10ನೇ) ರಿಲೇಯಲ್ಲಿ ತೃತೀಯ ಸ್ಥಾನ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶರತ್ ಸಂತೋಷ್ ಪಿಂಟೋ ತರಬೇತಿ ನೀಡಿರುತ್ತಾರೆ.

ಶಾಲಾ ಸಂಚಾಲಕರಾದ ಅತೀ ವಂ ಫಾ ವಾಲ್ಟರ್ ಡಿಮೆಲ್ಲೋ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here