ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ವಲಯಮಟ್ಟದ ಕ್ರೀಡಾಕೂಟ

0

ಗೇರುಕಟ್ಟೆ: ಸರಕಾರಿ ಫ್ರೌಡ ಶಾಲಾ ಕ್ರೀಡಾಂಗಣದಲ್ಲಿ ಪುಂಜಾಲಕಟ್ಟೆ ವಲಯದ 17 ರ ವಯೋಮಾನದ ಮಕ್ಕಳ ಅಥ್ಲೆಟಿಕ್ ಕ್ರೀಡಾ ಕೂಟ ಅ.7 ರಂದು ನಡೆಯಿತು.

ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮೆದಿನ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೂ ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ಕಳಿಯ ಗ್ರಾಮದ ಪಂಚಾಯತ್ ಉಪಾಧ್ಯಕ್ಷೆ ಇಂದಿರಾ ಬಿ.ಶೆಟ್ಟಿ, ಫ್ರೌಡ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಮೇರ್ಲ, ಕಳಿಯ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಸುಭಾಷಿಣಿ ಜನಾರ್ಧನ ಗೌಡ ಕೆ., ಕ್ರೀಡಾ ಸಂಯೋಜಕ ಸುಭಾಷ್ ಚಂದ್ರ ಪೂಜಾರಿ., ಕೊರಂಜ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ., ಶಿಕ್ಷಣ ತಜ್ಞರಾದ ಡಾಕ್ಟರ್ ಅನಂತ್ ಭಟ್ ಗೇರುಕಟ್ಟೆ., ಗೇರುಕಟ್ಟೆ ಫ್ರೌಡ ಶಾಲಾ ಉಪಪ್ರಾಂಶುಪಾಲೆ ಈಶ್ವರಿ ಕೆ., ಮೇಲುಸ್ತುವಾರಿ ಸಮಿತಿ ಸದಸ್ಯರಾದ ಹಸನಬ್ಬ., ಶೇಖರ ಗೌಡ ಎಮ್., ರೀತಾ ಚಂದ್ರಶೇಖರ, ಮಲ್ಲಿಕಾ ಜಗದೀಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾ ಹಾರೈಸಿದರು.

ವಿವಿಧ ಫ್ರೌಡ ಶಾಲಾ ಶಿಕ್ಷಕರು,ಕ್ರೀಡಾಪಟುಗಳು ಹಾಗೂ ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯರು ,ಮಕ್ಕಳ ಪೋಷಕರು ಭಾಗವಹಿಸಿದರು.

ಗೇರುಕಟ್ಟೆ ಫ್ರೌಡ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಸ್ವಾಗತಿಸಿ, ಧನ್ಯವಾದವಿತ್ತರು.ಸಹ ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here