ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ರಜತ ವರ್ಷದ ಭಜನಾ ತರಬೇತಿ ಕಮ್ಮಟದಲ್ಲಿ ಭಜನಾ ಸೇವಾಕರ್ತರನ್ನು ಹಾಗೂ ಭಜನಾ ಸಾಧಕರನ್ನು ಅ.3 ರಂದು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ “25 ವರ್ಷಗಳಲ್ಲಿ ಅನೇಕರು ಭಜನೆ ಕಮ್ಮಟದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ.ಉತ್ತಮ ಸಂದೇಶ ನೀಡುತ್ತಿದ್ದಾರೆ.ಇಲ್ಲಿನ ಉಪನ್ಯಾಸಗಳಲ್ಲಿ ಉತ್ತಮ ಸಂದೇಶ ಇರುತ್ತದೆ.ಸಂದೇಶಗಳ ಮೂಲಕ ಸಂಸ್ಕೃತಿ ಬೆಳೆಯುತ್ತದೆ.” ಎಂದರು.
“ಭಜನೆಗೆ ಅದ್ಭುತ ಶಕ್ತಿ ಇದೆ.ಸಂಘಟನೆಗೆ ಭಜನೆ ವರದಾನವಾಗಿದೆ. ಇದರಿಂದ ನಮ್ಮ ಸಂಸ್ಕೃತಿ ಅನಾವರಣ ಗೊಳ್ಳುತ್ತದೆ.ನಮ್ಮ ಕಲಿಕೆ ಇತರರಿಗೂ ಧಾರೆ ಎರೆಯುವ ಮೂಲಕ ಮಾದರಿಯಾಗಬೇಕು.ಹಿರಿಯರು ಒಗಟಿನ ಮೂಲಕವೇ ದೇವರನ್ನು ಕಂಡವರು.ಒಗಟಿನ ಮೂಲಕವೇ ವ್ಯಕ್ತಿಯ ಪರಿಚಯ ಸಾಧ್ಯ” ಎಂದು ಸಾಹಿತಿ ಹಿರೇಮಗಳೂರು ಕಣ್ಣನ್ ಹೇಳಿದರು.
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಡಾ.ಹೇಮಾವತಿ ವೀ.ಹೆಗ್ಗಡೆ, ಹರ್ಷೇಂದ್ರ ಕುಮಾರ್, ಶಂಕರ್ ಶ್ಯಾನುಭೋಗ್, ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.
ಭಜನಾ ಪರಿಷತ್ ಕಾರ್ಯದರ್ಶಿ ಪುರುಷೋತ್ತಮ ಜಿ.ಕೆ ನಿರೂಪಿಸಿದರು.ಶ್ರೀನಿವಾಸ್ ಸ್ವಾಗತಿಸಿದರು.ಭಜನಾ ಪರಿಷತ್ ನಲ್ಲಿ ಉತ್ತಮ ಸೇವೆ ನೀಡಿದ ಸಾಧಕರನ್ನು ಹಾಗೂ ಸೇವಾಕರ್ತರನ್ನು ಸನ್ಮಾನಿಸಲಾಯಿತು.