ಉಜಿರೆ: ಫೆಲಿಕ್ಸ್ ರೋಡ್ರಿಗಸ್ ಮನೆಯಿಂದ ನಗದು, ಚಿನ್ನಾಭರಣ ಕಳವು ಮಾಡಿದ್ದ ಅಂತಾರಾಜ್ಯ ಕಳ್ಳನ ಬಂಧನ- ಖದೀಮನನ್ನು ಬಂಧಿಸಿದ ಬೆಳ್ತಂಗಡಿ ಠಾಣಾ ಪೊಲೀಸರು

0

ಬೆಳ್ತಂಗಡಿ: ಉಜಿರೆಯ ಅಜಿತ್‌ನಗರ ಕಲ್ಲೆಯ ಫೆಲಿಕ್ಸ್ ರೊಡ್ರಿಗಸ್‌ರವರ ಮನೆಯಲ್ಲಿ ಆ.12ರಂದು ಕಳ್ಳತನ ಮಾಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸ್ ಠಾಣೆ ಸಿಬ್ಬಂದಿ ಆರೋಪಿ ಬಂಧಿಸಿ, ಆತನ ಬಳಿ ಇದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯುವು ಮೂಲತಃಹ ತಮಿಳುನಾಡಿನ ಕನ್ಯಾಕುಮಾರಿಯ ನಿವಾಸಿ ಉಮೇಶ್ ಬಳೆಗಾರ (46) ಎಂಬಾತನನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ಪ್ರಕರಣದ ಹಿನ್ನೆಲೆ: ಉಜಿರೆಯ ಅಜಿತ್‌ನಗರ ಕಲ್ಲೆಯ ಫೆಲಿಕ್ಸ್ ರೋಡ್ರಿಗಸ್ ಅವರು ಮೇಲಂತಬೆಟ್ಟುಗೆ ಆ.12ರಂದು ಕೆಲಸಕ್ಕೆ ಹೋಗಿದ್ದು ಅವರ ಪತ್ನಿ ಗ್ರೇಟಾರವರು ಉಜಿರೆಯ ಅನುಗ್ರಹ ಶಾಲೆಯಲ್ಲಿ ಹೆಲ್ಪರ್ ಕೆಲಸಕ್ಕೆ ಹೋಗಿದ್ದರು. ಅವರ ಇಬ್ಬರು ಹೆಣ್ಣು ಮಕ್ಕಳು ಎಂದಿನಂತೆ ಕಾಲೇಜಿಗೆ ಹೋಗಿದ್ದರು. ಇವರೆಲ್ಲರೂ ಬೆಳಗ್ಗೆ 8 ಗಂಟೆಗೆ ಮನೆಗೆ ಬೀಗ ಹಾಕಿ ಹೋದ ಬಳಿಕ ಕಳ್ಳ ಮನೆಯ ಹಿಂದಿನ ಬಾಗಿಲಿನ ಮೂಲಕ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣವನ್ನು ಕಳವುಗೈದಿದ್ದ. ಮಕ್ಕಳಿಗೆ ತರಗತಿ ಮಧ್ಯಾಹ್ನದವರೆಗೆ ಇದ್ದ ಕಾರಣ ಫೆಲಿಕ್‌ಸ್ ರೋಡ್ರಿಗಸ್‌ರವರ ದೊಡ್ಡ ಮಗಳು ಪ್ಲಾವಿಯಾ ಗ್ಲೇನೇಶಿಯಾರವರು ಮಧ್ಯಾಹ್ನ 1 ಗಂಟೆಗೆ ಮನೆಗೆ ಬಂದು ಎದುರಿನ ಬಾಗಿಲಿನ ಬೀಗ ತೆಗೆದು ಬಾಗಿಲು ದೂಡಿದಾಗ ಒಳಗಿನಿಂದ ಚಿಲಕ ಹಾಕಿರುವುದು ಗೊತ್ತಾಗಿತ್ತು. ಎದುರಿನ ಕಿಟಕಿಯಲ್ಲಿ ನೋಡಿದಾಗ ಅಡುಗೆ ಕೋಣೆಯ ಕಿಟಕಿಯ ಬಾಗಿಲು ಅರ್ಧ ತೆರೆದು ಹಿಂಬದಿ ಬಾಗಿಲು ತೆರೆದಿರುವುದು ಕಂಡು ಬಂದಿತ್ತು.ಕೂಡಲೇ ಪಕ್ಕದಲ್ಲಿರುವ ಅಲ್ವಿನ್‌ರವರ ಮನೆಗೆ ಹೋದ ಪ್ಲಾವಿಯಾರವರು ತನ್ನ ತಂದೆಗೆ ಪೋನ್ ಮಾಡಿ ವಿಚಾರ ತಿಳಿಸಿದ್ದರು. ಫೆಲಿಕ್ಸ್ ರೊಡ್ರಿಗಸ್ ಅವರು ಬಂದು ಮನೆಯೊಳಗಡೆ ನೋಡಿದಾಗ ಹಿಂಬದಿ ಬಾಗಿಲು ತೆರೆದಿದ್ದು ಒಳಗಡೆ ಕೋಣೆಯಲ್ಲಿ ಕಪಾಟು ತೆರೆದಿತ್ತು. ಅಲ್ಲೇ ಚೀಲದಲ್ಲಿದ್ದ ಕೀಯನ್ನು ಹುಡುಕಿ ತೆಗೆದು ಕಳ್ಳರು ಕಪಾಟು ತೆರೆದು ಒಳಗಡೆ ಲಾಕರಲ್ಲಿ ಚಿನ್ನಾಭರಣ ಇಡುವ ಬಾಕ್ಸ್ ಹಾಗೂ ಹಣ ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಸರ್ಕಲ್ ಇನ್‌ಸ್‌ಪೆಕ್ಟರ್ ನಾಗೇಶ್ ಕದ್ರಿ, ಸಬ್‌ಇನ್‌ಸ್‌ಪೆಕ್ಟರ್ ಧನ್‌ರಾಜ್ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ ತನಿಖೆ ನಡೆಸಿದ್ದರು.

LEAVE A REPLY

Please enter your comment!
Please enter your name here