ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೇಂಬರ್ಜೆ ನಿವಾಸಿ ಲ್ಯಾನ್ಸಿ ಫೆರ್ನಾಂಡಿಸ್ (47ವ)ರವರು ಸೆ.13ರಂದು ಇಸ್ರೇಲ್ ನಲ್ಲಿ ನಿಧನರಾದ ಘಟನೆಗೆ ಕಾರಣ ಬಹಿರಂಗವಾಗಿದೆ.
ಬೆಳ್ತಂಗಡಿ ಎಲೆಕ್ಟ್ರಾನಿಕ್ಸ್ ಶಾಪ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಇವರು ನಂತರ ಉದ್ಯೋಗಕ್ಕಾಗಿ ಇಸ್ರೇಲ್ ಗೆ ತೆರಳಿ ಹಲವಾರು ವರ್ಷದಿಂದ ಅಲ್ಲಿ ಉದ್ಯೋಗದಲ್ಲಿದ್ದರು.ಇವರ ಸಾವಿಗೆ ಏನು ಕಾರಣ ಎಂದು ಪೋಸ್ಟ್ ಮಾರ್ಟಂ ವರದಿಗೆ ಕಾಯಲಾಗುತ್ತಿತ್ತು.ಇದೀಗ ಪೋಸ್ಟ್ ಮಾರ್ಟಂ ವರದಿ ಕುಟುಂಬಸ್ಥರ ಕೈ ಸೇರಿದ್ದು ಲ್ಯಾನ್ಸಿ ಫೆರ್ನಾಂಡೀಸ್ ಸಾವಿಗೆ ಹೃದಯಾಘಾತ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದೆ.
p>