ಉಜಿರೆ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ಉಜಿರೆ: ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘ ಇದರ 2022-23 ನೇ ಸಾಲಿನ ಸರ್ವ ಸದಸ್ಯರ ವಾ ರ್ಷಿಕ ಸಾಮಾನ್ಯ ಸಭೆ ಸೆ.23 ರಂದು ಉಜಿರೆ ಶಾರದಾ ಮಂಟಪದಲ್ಲಿ ಸಂಘದ ಅಧ್ಯಕ್ಷ ಸುರೇಶ ಗೌಡ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಆರ್ಥಿಕ ವರ್ಷದಲ್ಲಿ ರೂ. 1041459/ ನಿವ್ವಳ ಲಾಭ ಗಳಿಸಿದೆ.ದ.ಕ.ಹಾಲು ಒಕ್ಕೂಟ ಬೆಳ್ತಂಗಡಿಯ ಪಶು ವೈದ್ಯಾಧಿಕಾರಿ ಡಾ.ಗಣಪತಿ ಬಿ.ಎಂ., ದ.ಕ.ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಯಮುನಾ ಸದಸ್ಯರಿಗೆ ವಿವಿಧ ಮಾಹಿತಿ ನೀಡಿದರು.ಸಂಘದ ಉಪಾಧ್ಯಕ್ಷ ವಿಜಯ ಪೂಜಾರಿ, ನಿರ್ದೇಶಕರುಗಳಾದ ಸತೀಶ್ ಕೆ., ಪುರುಷೋತ್ತಮ ಬಿ.ಎಸ್., ಕೇಶವ, ಕೇಶವ ಗೌಡ, ಅನಿಲ್ ಡಿಸೋಜ, ಸಂತೋಷ ಎಂ., ಜಯಶ್ರೀ ಪ್ರಕಾಶ್, ನಾಗವೇಣಿ, ಶಶಿಕಲಾ, ಬೇಬಿ, ಕಿಟ್ಟ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೌಮ್ಯಲತಾ ವಾರ್ಷಿಕ ವರದಿ ವಾಚಿಸಿದರು.ಕಾರ್ಯಕ್ರಮದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಒದಗಿಸುವ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರನ್ನು ಗೌರವಿಸಲಾಯಿತು.

ಹಾಲು ಒದಗಿಸುವ ಸದಸ್ಯರ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

p>

LEAVE A REPLY

Please enter your comment!
Please enter your name here