ಕೊಯ್ಯೂರು: ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ ಇದರ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.23 ರಂದು ಮಲೆಬೆಟ್ಟು ವನಸಿರಿ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಎಚ್. ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಆರ್ಥಿಕ ವರ್ಷದಲ್ಲಿ ರೂ.9.22,883/ ನಿವ್ವಳ ಲಾಭ ಗಳಿಸಿದೆ.ದ.ಕ.ಹಾಲು ಒಕ್ಕೂಟ ಶಿಬಿರ ಕಚೇರಿ ಬೆಳ್ತಂಗಡಿ ಸಹಾಯಕ ವ್ಯವಸ್ಥಾಪಕ ರಾಜೇಶ್ ಕಾಮತ್, ಸಂಘದ ಉಪಾಧ್ಯಕ್ಷ ಗಂಗಯ್ಯ ಗೌಡ, ನಿರ್ದೇಶಕರುಗಳಾದ ಶೇಷಪ್ಪ, ಜಯಂತ ಗೌಡ, ಅಣ್ಣಿ ಪೂಜಾರಿ, ದಾಮೋದರ ಗೌಡ, ಉದಯ ಕುಮಾರ್, ಪುಷ್ಪರಾಜ್, ಚಿತ್ರಾ, ಲಕ್ಷ್ಮೀ, ಪ್ರವೀಣ್ ಕುಮಾರ್, ಸಂಜೀವ ಮಲೆಕುಡಿಯ, ನಾರಾಯಣ ನೀರಕಜೆ ಉಪಸ್ಥಿತರಿದ್ದರು.
ಕಾರ್ಯದರ್ಶಿ ರೇಷ್ಮಾ ವಾರ್ಷಿಕ ವರದಿ ವಾಚಿಸಿದರು.
p>