ಬೆಳ್ತಂಗಡಿ: ಮೇರಿ ಗ್ರೇಸ್ ಮೊರ್ರಿಸ್ ನಿಧನ

0

ಬೆಳ್ತಂಗಡಿ: ಬೆಳ್ತಂಗಡಿ ಸಂತ ತೆರೆಸಾ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕಿ, ದಿ.ಶೇರಿ ಪಿರೇರಾ ರವರ ಧರ್ಮಪತ್ನಿ ಮೇರಿ ಗ್ರೇಸ್ ಮೊರ್ರಿಸ್ (ಮೇರಿ ಟೀಚರ್, 74ವ) ಅಸೌಖ್ಯದಿಂದ ಸೆ.23ರಂದು ನಿಧನರಾಗಿದ್ದಾರೆ.

ಮೃತರು ಸಂತ ತೆರೆಸಾ ಫ್ರೌಢ ಶಾಲೆಯಲ್ಲಿ ಹಲವಾರು ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳಿಗೆ ಶಿಕ್ಷಣ ಪೋಷಕರಾಗಿದ್ದರು.

ಇವರು 3ಹೆಣ್ಣು 1ಪುತ್ರನನ್ನು ಹಾಗೂ ಸಾವಿರಾರು ವಿದ್ಯಾರ್ಥಿ ಬಳಗವನ್ನು, ಕುಟುಂಬ ವರ್ಗದವರನ್ನು ಅಗಲಿದ್ದಾರೆ.

ನಾಳೆ (ಸೆ.24) ಬೆಳಿಗ್ಗೆಯಿಂದಲೇ ಬೆಳ್ತಂಗಡಿ ಚರ್ಚ್ ಬಳಿ ಇರುವ ತಮ್ಮ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮೃತರ ಅಂತಿಮ ಕ್ರಿಯೆಯು ಸೆ.24ರಂದು 3.30ಕ್ಕೆ ಬೆಳ್ತಂಗಡಿ ಹೋಲಿ ರೆಡಿಮಾರ್ ಚರ್ಚ್ ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here