

ಮಡಂತ್ಯಾರು: ಅನಂತಕೃಷ್ಣ ಭಟ್ ಕುಕ್ಕಿಲ ಇವರ ಪೌರೋಹಿತ್ಯದಲ್ಲಿ ಸೆ.19ರಿಂದ 22ರವರೆಗೆ ಮಡಂತ್ಯಾರು ಗಣಪತಿ ಮಂಟಪದಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಿತು.
ಸೆ.22ರಂದು ಧಾರ್ಮಿಕ ಸಭೆ ನಡೆದು ಧಾರ್ಮಿಕ ಸಭೆ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಮೋದ್ ಕುಮಾರ್ ಬಳ್ಳಮಂಜ ವಹಿಸಿದ್ದರು.ಧಾರ್ಮಿಕ ಪ್ರವಚನ ಬಾಲವಾಗ್ಮಿ ಕು.ಹಾರಿಕಾ ಮಂಜುನಾಥ್ ನೀಡಿದರು.
ಮುಖ್ಯ ಅತಿಥಿ ಶ್ರೀ ಕ್ಷೇತ್ರ ಪಾರೆಂಕಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಠಲ ಶೆಟ್ಟಿ ಮೂಡಾಯೂರು, ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ನವೀನ್, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಮೊಗೆರೋಡಿ ಭಾಗವಹಿಸಿದ್ದರು.
ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಪದ್ಮನಾಭ ಸುವರ್ಣ ಸ್ವಾಗತಿಸಿ, ವಿಶ್ವನಾಥ ಪೂಜಾರಿ ವಂದಿಸಿದರು.
ಬಾಲವಾಗ್ಮಿ ಕು. ಹಾರಿಕಾ ಮಂಜುನಾಥ್ ಇವರನ್ನು ಸನ್ಮಾನಿಸಲಾಯಿತು.ವೀರೇಂದ್ರ ಕುಮಾರ್ ಸನ್ಮಾನಿತರ ಪರಿಚಯ ಮಾಡಿದರು.
ಕಾರ್ಯದರ್ಶಿ ಸಚಿನ್ ಪೂಜಾರಿ, ಕೋಶಾಧಿಕಾರಿ ವೆಂಕಟರಮಣ ಗೌಡ, ಜೊತೆ ಕಾರ್ಯದರ್ಶಿ ಶಂಕರ್ ಶೆಟ್ಟಿ ಹಾಗೂ ಸಂಘಟಕರು, ಗಣ್ಯರು, ಭಕ್ತಧಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಸಂಜೆ ಶ್ರೀ ಗಣೇಶ ಮೂರ್ತಿಯ ಶೋಭಾಯಾತ್ರೆ ನಡೆಯಲಿದೆ.