ಉಜಿರೆ: ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮನವರ 34ನೇ ಪುಣ್ಯತಿಥಿ ಆಚರಣೆ

0

ಉಜಿರೆ: ಧರ್ಮಪ್ರಭಾವನೆ ಮತ್ತು ಆತ್ಮನ ವಿಕಾಸಕ್ಕಾಗಿ ಧರ್ಮದ ಮರ್ಮವನ್ನರಿತು ಅದನ್ನು ವೃತವಾಗಿ ಜೀವನದಲ್ಲಿ ಅನುಷ್ಠಾನಗೊಳಿಸಬೇಕು.ಸಂಪಾದನೆಯ ಸ್ವಲ್ಪ ಭಾಗವನ್ನಾದರೂ ದಾನ ಮತ್ತು ಸೇವೆಗಾಗಿ ವಿನಿಯೋಗಿಸಬೇಕು ಎಂದು ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.ಅವರು ಸೆ.21ರಂದು ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮನವರ 34ನೇ ಪುಣ್ಯತಿಥಿ ಆಚರಣೆ ಸಂದರ್ಭದಲ್ಲಿ 704 ವಿದ್ಯಾರ್ಥಿಗಳಿಗೆ ಹದಿನೇಳು ಲಕ್ಷದ ಐವತ್ತೊಂದು ಸಾವಿರದ ಐದುನೂರು ರೂ., ವಿದ್ಯಾರ್ಥಿ ಪ್ರೋತ್ಸಾಹಧನ ವಿತರಿಸಿ ಮಾತನಾಡಿದರು.

ಆತ್ಮನಿಗಂಟಿದ ಕರ್ಮವನ್ನು ಕಳೆದು ಆತ್ಮನ ನಿಜಸ್ವರೂಪ ತಿಳಿಯಲು ದಶಲಕ್ಷಣ ಪರ್ವ ಆಚರಣೆ ಮಾಡುತ್ತೇವೆ.ದೇವರು, ಗುರುಗಳು ಮತ್ತು ಶಾಸ್ತ್ರದಲ್ಲಿ ವಿನಯದಿಂದ ಗೌರವವನ್ನು ತೋರಿಸಬೇಕು. ಮಾನಕಷಾಯ ತ್ಯಾಗದಿಂದ ಮೃದುತ್ವ ಮತ್ತು ವಿನಯ ಬರುತ್ತದೆ. ವಿದ್ಯೆಯೊಂದಿಗೆ ವಿದ್ಯಾರ್ಥಿಗಳು ತ್ಯಾಗ, ಸೇವೆ ಮತ್ತು ವಿನಯವನ್ನೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮನುಷ್ಯಜನ್ಮ ಶ್ರೇಷ್ಠವಾಗಿದ್ದು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಭಾರತ ಇಂದು ವಿಶ್ವಗುರುವಿನ ಮಾನ್ಯತೆಗೆ ಪಾತ್ರವಾಗಿದೆ. ಆಹಿಂಸೆ, ಬದುಕು ಮತ್ತು ಬದುಕಲು ಬಿಡು, ಪರಸ್ಪರೋಪಗ್ರಹೋ ಜೀವಾನಾಂ ಎಂಬುದು ಜೈನಧರ್ಮದ ಸಾರವಾಗಿದೆ.ಎಲ್ಲರೂ ನೈತಿಕತೆ ಬೆಳೆಸಿಕೊಂಡು ಸರಿ ತಪ್ಪು ಬಗ್ಯೆ ವಿಮರ್ಶೆ ಮಾಡಿ ವಿವೇಕದಿಂದ ವರ್ತಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಬಸದಿಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಸ್ವಾಗತಿಸಿದರು.ಧವಳಾ ಜೈನ್ ಧನ್ಯವಾದವಿತ್ತರು.ಶಿಕ್ಷಕ ಕೆ. ಧರಣೇಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.ಬಸದಿಯಲ್ಲಿ 108 ಕಲಶ ಅಭಿಷೇಕ ಮತ್ತು ವಿಶೇಷ ಪೂಜೆಗಳು ನಡೆದವು.

ವಿನಯಾ ಜೆ. ಬಳ್ಳಾಲ್, ಡಾ. ಪ್ರಿಯಾ ಬಳ್ಳಾಲ್, ವಿಜಯಲಕ್ಷ್ಮಿ ಪಿ.ಎನ್.ಆರಿಗಾ, ಕೆ.ರಾಜವರ್ಮ ಬಳ್ಳಾಲ್, ಪ್ರಸನ್ನ ಕುಮಾರ್ ಮತ್ತು ನಿವೃತ್ತ ವಿಜಯಾ ಬ್ಯಾಂಕ್ ಪ್ರಬಂಧಕ ಎಂ. ಜಿನರಾಜ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here