ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ 108 ತೆಂಗಿನ ಕಾಯಿ ಗಣಹೋಮ ಹಾಗೂ ರಂಗಪೂಜೆ

0

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ 108 ತೆಂಗಿನ ಕಾಯಿ ಗಣಹೋಮ ಹಾಗೂ ರಂಗಪೂಜೆ ವಿಜೃಂಭಣೆಯಿಂದ ಇಂದು(ಸೆ.19) ಜರುಗಿತು.

ಬೆಳಿಗ್ಗೆ 108 ಕಾಯಿ ಗಣಹೋಮ ಹಾಗೂ ರಂಗಪೂಜೆ ನೆರವೇರಿತು.ನಂತರ ದೇವರಿಗೆ ಮಹಾಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಸಮಿತಿಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here