ಪೆರ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

0

ಪೆರ್ಲ: ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಲ್ಲ, ಪಠ್ಯೇತರ ಚಟುವಟಿಕೆಯು ಅವಶ್ಯಕ.ಮಕ್ಕಳ ಮಾನಸಿಕ ಮತ್ತು ಭೌತಿಕ ಬೆಳವಣಿಗೆ ಆಗಬೇಕಾದರೆ ಪಠ್ಯೇತರ ಚಟುವಟಿಕೆಗಳು ಕೂಡ ಅತ್ಯಗತ್ಯ.2023-24 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೆರ್ಲ ಇಲ್ಲಿ ನೆರವೇರಿತು.

ಇದರ ಉದ್ಘಾಟನೆಯನ್ನು ನಿವೃತ್ತ ಮುಖ್ಯ ಗುರುಗಳಾದಂತಹ ಮೋಹನ್ ಉಪಾಧ್ಯಾಯ ಇವರು ನೆರವೇರಿಸಿದರು.

ಶಿಬಾಜೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ದಿನಕರ್ ಕುರುಪ್, ಸದಸ್ಯರುಗಳಾದಂತಹ ವಿನಯ ಚಂದ್ರ, ಹಾಗೂ ರತೀಶ್ ಗೌಡ ,SDMC ಅಧ್ಯಕ್ಷರಾದಂತಹ ನಾರಾಯಣಗೌಡ ಹಾಗೂ ಉಪಾಧ್ಯಕ್ಷರಾದಂತಹ ಶುಭಶ್ರೀ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದಂತಹ ತ್ಯಾಂಪಣ್ಣಶೆಟ್ಟಿಗಾರ್ ಮುಖ್ಯ ಗುರುಗಳಾದಂತಹ ಉಷಾ ವಿ ಇವರು ಉಪಸ್ಥಿತರಿದ್ದರು.

ಸ್ವಾಗತವನ್ನು ಶಾಲಾ ಮುಖ್ಯ ಶಿಕ್ಷಕಿ ಉಷಾ ವಿ, ನಿರೂಪಣೆಯನ್ನು ಶಾಲಾ ಶಿಕ್ಷಕಿ ನಮಿತಾ, ವಂದನಾರ್ಪಣೆಯನ್ನು ಶಾಲಾ ಶಿಕ್ಷಕರಾದ ಮಂಜುನಾಥ್ ರವರು ನೆರವೇರಿಸಿದರು.

ಪ್ರತಿಭಾ ಕಾರಂಜಿ ಸ್ಪರ್ಧೆಯ ಸಮಗ್ರ ಪ್ರಶಸ್ತಿಯನ್ನು ಪಡೆದು ಕೊಂಡ ಶಾಲೆಯ ವಿವರ: ಹಿರಿಯ ವಿಭಾಗ- ಪ್ರಥಮ Ghps ಆರಸಿನಮಕ್ಕಿ, ದ್ವಿತೀಯ Gups ಶಿಶಿಲ, ಕಿರಿಯ ವಿಭಾಗ-ಪ್ರಥಮ Glps ಕಟ್ಟೆ, ದ್ವಿತೀಯ Glps ಭಂಡಿಹೊಳೆ.

LEAVE A REPLY

Please enter your comment!
Please enter your name here