ಸಾವ್ಯ: ಸ.ಉ.ಹಿ.ಪ್ರಾ ಶಾಲೆಯಲ್ಲಿ ಅಂಡಿಂಜೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

0

ಸಾವ್ಯ: ಸ.ಉ.ಹಿ.ಪ್ರಾ ಶಾಲೆಯಲ್ಲಿ ಅಂಡಿಂಜೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ದಯಾನಂದ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.ನಿತಿನ್ ಮುಂಡೆವು ಅಧ್ಯಕ್ಷರು ಗ್ರಾಮ ಪಂಚಾಯತ್ ಅಂಡಿಂಜೆ ದೀಪ ಬೆಳಗಿಸಿ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿದರು. ಹರೀಶ್ ಹೆಗ್ಡೆ ಗ್ರಾಮ ಪಂಚಾಯತ್ ಸದಸ್ಯರು ಶುಭ ಕೋರಿದರು.

ಗ್ರಾಮ ಪಂಚಾಯತಿ ಸದಸ್ಯರುಗಳಾದ ಸುಜಾತ, ಸರೋಜಾ ಉಪಸ್ಥಿತರಿದ್ದರು.ರಾಜೇಶ್ ಸಿಆರ್ಪಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.ಸಂತೋಷ್ ಕುಮಾರ್, ಮುಖ್ಯೋಪಾಧ್ಯಾಯರು ಸ್ವಾಗತಿಸಿದರು.ಪಂಜು ಕಾರ್ಯಕ್ರಮ ನಿರೂಪಿಸಿದರು. ಸುಮಿತ್ರ ವಂದಿಸಿದರು. 7 ಶಾಲೆಗಳ ಮಕ್ಕಳು ಭಾಗವಹಿಸಿದ್ದರು.

ಸಾವ್ಯಶಾಲೆಯ ಮಕ್ಕಳು ಕಿರಿಯ ವಿಭಾಗದಲ್ಲಿ ಪ್ರಥಮ ಎರಡು ದ್ವಿತೀಯ ಎರಡು ತೃತೀಯ ಮೂರು ಬಹುಮಾನ ಪಡೆದರು. ಹಿರಿಯ ವಿಭಾಗದಲ್ಲಿ ದ್ವಿತೀಯ 3 ತೃತೀಯ 6 ಬಹುಮಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತು ವಿಜೇತರಾದ ಮಕ್ಕಳಿಗೆ ಪೋಷಕರು ಮತ್ತು ಎಸ್. ಡಿ. ಎಂ. ಸಿ. ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ರೆನ್ನಿ ಪೆರ್ನಾಂಡಿಸ್, ಶರ್ಮಿಳ, ದೀಪಾ ಶೆಟ್ಟಿ, ಸವಿತಾ, ನವ್ಯ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ್ದರು.ಅಂಡಿಂಜೆ ಶಾಲೆ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆಯಿತು.ರಮಣಿ ಹೆಗ್ಡೆ ಉಪಾಧ್ಯಕ್ಷರು ಎಸ್.ಡಿ. ಎಂ.ಸಿ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here