ಕೊಕ್ಕಡ: ಸ.ಪ್ರೌ.ಶಾಲೆ ಕೊಕ್ಕಡದಲ್ಲಿ ತಾಲೂಕು ಮಟ್ಟದ ಖೋ ಖೋ ಪಂದ್ಯಾಟ ಸೆ.15ರಂದು ನಡೆಯಿತು.ತಾಲೂಕಿನ ಹಲವು ಶಾಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡ ಇದರ ಅಧ್ಯಕ್ಷರಾದ ಕುಶಾಲಪ್ಪ ಗೌಡರವರು ನೆರವೇರಿಸಿ ಮಾತನಾಡಿದ ಅವರು ಸೋಲು ಗೆಲುವು ಎರಡು ಇದ್ದದ್ದೇ ಉತ್ತಮವಾಗಿ ಆಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಧ್ಯಾರ್ಥಿಗಳು ಮಿಂಚಬೇಕು ಎಂದು ಬಂದಿದ್ದ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ನಾಗೇಶ್ ಕುಮಾರ್ ರವರು ಮಾತನಾಡಿ ಖೋಖೋ ಪಂದ್ಯಾಟ ಇದು ದ್ರೋಣಾಚಾರ್ಯರು ಕಲಿಸಿದ ಆಟ ದೇಶ ಮಟ್ಟದಲ್ಲಿ ಗೆದ್ದವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡುತ್ತಾರೆ ಇದನ್ನು ನಮ್ಮ ದೇಶದ ಸೈನಿಕರಿಗೂ ತರಬೇತಿ ಸಂದರ್ಭದಲ್ಲಿ ಆಡಿಸುತ್ತಾರೆ. ಇದು ಧೈರ್ಯ ಸಾಹಸ ಮತ್ತು ಏಕಾಗ್ರತೆಯ ಆಟ ನೀವೆಲ್ಲರೂ ಉತ್ತಮವಾಗಿ ಆಡಿ ಎಂದು ಶುಭನುಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಕಳೆದ ಬಾರಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಭರತೇಶ, ಹರ್ಷಿತಾ, ಧನ್ಯತಾ ರವರನ್ನು ನಗದು ಬಹುಮಾನ ನೀಡಿ ಸನ್ಮಾನಿಸಿದರು.ಹಾಗೆಯೇ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತೀ ಔಟ್ ಒಪ್ ಔಟ್ ಅಂಕ ಪಡೆದ ವಿದ್ಯಾರ್ಥಿಗಳಾದ ಸೌಮ್ಯ,ಭರತೇಶ, ಅನ್ವಿತ ರವರಿಗೆ ಶಾಲಾ ವತಿಯಿಂದ ಕನ್ನಡದ ಕುವರ,ಕುವರಿ ಪ್ರಶಸ್ತಿ ನೀಡಿ ಗೌರವಿಸಿದರು.ಹಾಗೆಯೇ ಕಳೆದ ಬಾರಿ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿಷ್ಯಾರ್ಥಿಗಳಾದ ಶರಣ್ಯ,ಮೊಹಮ್ಮದ್,ದಿಶಾ,ಸ್ಪರ್ಶ,ರಿಲೇ ಯಲ್ಲಿ ಸ್ಪರ್ಧಿಸಿದ ದಿಶಾ ಮತ್ತು ತಂಡ,ಕಬಡ್ಡಿಯಲ್ಲಿ ಸ್ಪರ್ಧಿಸಿದ ಹರ್ಷಿತಾ ಮತ್ತು ತಂಡ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಿದರು.
ವೇದಿಕೆಯಲ್ಲಿ ಬೇಬಿ ಗ್ರಾ.ಪಂ.ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷರಾದ ಪ್ರಭಾಕರ್, ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಅಲಂಬಿಲ, ಸದಸ್ಯರುಗಳಾದ ಪುರುಷೋತ್ತಮ್, ಲತಾ, ನಿವೃತ ಮುಖ್ಯ ಶಿಕ್ಷಕರಾದ ಗಣೇಶ್ ಐತಾಳ್, ಪ್ರಾಂಶುಪಾಲರಾದ ವಿಶ್ವನಾಥ ರೈ, ಕಾರ್ಯಾಧ್ಯಕ್ಷರಾದ ದಾಮೋದರ ಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಭಾಕರ್ ಸ್ವಾಗತಿಸಿ, ಬಿನಾ ಧನ್ಯವಾದವಿತ್ತರು.